ಪುತ್ತೂರು ಸರ್ಕಾರಿ ಆಸ್ಪತ್ರೆ ಮೇಲ್ದರ್ಜೆಗೆ: ತಿಂಗಳ ಒಳಗೆ ಸರ್ಕಾರಕ್ಕೆ ಪ್ರಸ್ತಾವನೆ; ಶಾಸಕ ಮಠಂದೂರು

ಪುತ್ತೂರು: ಪುತ್ತೂರು ಆರೋಗ್ಯ ಇಲಾಖೆ ಮೇಲ್ದರ್ಜೆಗೇರಿದ್ದು, ಈ ಕುರಿತು ಆಸ್ಪತ್ರೆಯ ಸುತ್ತಮುತ್ತಲಿನ ಜಾಗವನ್ನು ಸರಕಾರಿ ಆಸ್ಪತ್ರೆಗೆ ಪಹಣಿ ಮಾಡಿ ಒಟ್ಟು 5 ಎಕರೆಯಲ್ಲಿ 300 ಹಾಸಿಗೆಯ ಸಾಮರ್ಥ್ಯದ ಆಸ್ಪತ್ರೆ ಮಾಡಲು ತಿಂಗಳೊಳಗೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸುವುದಾಗಿ ಶಾಸಕ ಸಂಜೀವ ಮಠಂದೂರು ಹೇಳಿದರು.
ಸರಕಾರಿ ಆಸ್ಪತ್ರೆಯಲ್ಲಿ ಆಸ್ಪತ್ರೆಯ ಅಭಿವೃದ್ದಿ ಕುರಿತು ಶುಕ್ರವಾರ ನಡೆದ ಸಭೆಯಲ್ಲಿ ಶಾಸಕರು ಜಿಲ್ಲಾ ಆರೋಗ್ಯಾಧಿಕಾರಿಯವರಿಗೆ ಆಸ್ಪತ್ರೆಯ ಜಾಗದ ಕುರಿತು ಮಾಹಿತಿ ನೀಡಿ ತಕ್ಷಣ ಅದಕ್ಕೆ ಅಗತ್ಯವಿರುವ ದಾಖಲೆಗಳ ವ್ಯವಸ್ಥೆ ಮಾಡಬೇಕು ಎಂದರು. ಬಳಿಕ ಶಾಸಕರು ಲಭ್ಯ ಸ್ಥಳಾವಕಾಶದ ಬಗ್ಗೆ ಪರಿಶೀಲನೆ ನಡೆಸಿದರು.
ಈ ಸಂದರ್ಭ ಜಿಲ್ಲಾ ಆರೋಗ್ಯಾಧಿಕಾರಿ ರಾಮಚಂದ್ರ ಬಾಯಾರಿ, ತಹಸೀಲ್ದಾರ್ ರಮೇಶ್ ಬಾಬು, ವೈದ್ಯಾಧಿಕಾರಿ ಡಾ. ಆಶಾಜ್ಯೋತಿ ಪುತ್ತೂರಾಯ, ಸಹಾಯಕ ಆಡಳಿತಾಧಿಕಾರಿ ಯೋಗಾನಂದ, ಡಾ. ರಾಶಿಕ್, ಡಾ. ತಬಸುಮ, ಡಾ. ಅಜೇಯ್, ಡಾ. ಶಾರದಮ್ಮ, ಆರೋಗ್ಯ ರಕ್ಷಾ ಸಮಿತಿ ಸದಸ್ಯರಾದ ವಿದ್ಯಾ ಗೌರಿ, ರಫೀಕ್ ದರ್ಬೆ, ಡಾ.ಕೃಷ್ಣ ಪ್ರಸನ್ನ ಉಪಸ್ಥಿತರಿದ್ದರು.





