ತೋನ್ಸೆಯಲ್ಲಿ ‘ನಮ್ಮ ನಡಿಗೆ ತ್ಯಾಜ್ಯಮುಕ್ತ ಗ್ರಾಮದ ಕಡೆಗೆ’

ಉಡುಪಿ, ಫೆ.12: ತೋನ್ಸೆ ಗ್ರಾಪಂ ಮತ್ತು ಗ್ರಾಮದ ಪರಿಸರಾಸಕ್ತ ಸಾರ್ವಜನಿಕರ ಸಹಭಾಗಿತ್ವದೊಂದಿಗೆ ನಮ್ಮ ನಡಿಗೆ ತ್ಯಾಜ್ಯ ಮುಕ್ತ ಗ್ರಾಮದ ಕಡೆಗೆ ಕಾರ್ಯಕ್ರಮದಡಿ ಜಾಥಾ ಮತ್ತು ಸ್ವಚ್ಛತಾ ಕಾರ್ಯಕ್ರಮವನ್ನು ಶುಕ್ರವಾರ ಆಯೋಜಿಸಲಾಗಿತ್ತು.ಗುಜ್ಜರಬೆಟ್ಟಿನ ಸಾರ್ವಜನಿಕ ರುದ್ರಭೂಮಿ ಸಮೀಪದ ಕೆಪ್ಪತೋಡು ಸೇತುವೆ ಬಳಿಯಿಂದ ಕೆಮ್ಮಣ್ಣು ಪೇಟೆಯ ಹೊಳೆ ಬದಿವರೆಗೆ ನಡಿಗೆಯ ಜೊತೆ ರಸ್ತೆಯ ಇಕ್ಕೆಲಗಳಲ್ಲಿನ ಕಸಗಳನ್ನು ಹೆಕ್ಕಿ ಸ್ವಚ್ಛಗೊಳಿಸಲಾಯಿತು. ಸಂಗ್ರಹಿಸಲಾದ ಕಸಗಳನ್ನು ಗ್ರಾಪಂನ ಎಸ್‌ಎಲ್ಆರ್ಎಂ ಘಟಕದ ತ್ಯಾಜ್ಯ ಸಾಗಾಟ ವಾಹನದಲ್ಲಿ ತುಂಬಿಸಿಕೊಂಡು ವಿಲೇವಾರಿ ಮಾಡಲಾಯಿತು.
ಈ ನಡಿಗೆಯಲ್ಲಿ ಗ್ರಾಪಂನ ನಿಯೋಜಿತ ಅಧ್ಯಕ್ಷೆ ಲತಾ ಸಹಿತ ನೂತನವಾಗಿ ಆಯ್ಕೆಯಾದ 20 ಗ್ರಾಪಂ ಸದಸ್ಯರುಗಳು, ಎಸ್ಎಲ್ಆರ್ಎಂ ಘಟಕ ಮತ್ತು ಗ್ರಾಪಂ ಸಿಬಂದಿಗಳು ಪಾಲ್ಗೊಂಡಿದ್ದರು. ಗ್ರಾಪಂ ವ್ಯಾಪ್ತಿಯ ಪರಿಸರಾಸಕ್ತ ಸಂಘಟನೆ ನಿರ್ಮಲ್ ತೋನ್ಸೆ, ಸಂಜೀವಿನಿ ಸ್ವಸಹಾಯ ಒಕ್ಕೂಟ, ಹೂಡೆಯ ಎಸ್ಐಒ ಘಟಕದ ಪದಾಧಿಕಾರಿಗಳು, ಸಾಲಿಹಾತ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಮತ್ತು ಗ್ರಾಪಂ ವ್ಯಾಪ್ತಿಯ ಆಸಕ್ತ ಸಾರ್ವಜನಿಕರು ಈ ಸ್ವಚ್ಛತಾ ನಡಿಗೆಯಲ್ಲಿ ಹೆಜ್ಜೆ ಹಾಕಿದರು.ಗ್ರಾಪಂನ ಅಭಿವೃದ್ಧಿ ಅಧಿಕಾರಿ ಕಮಲಾ, ನಿರ್ಮಲ ತೋನ್ಸೆಯ ಅಧ್ಯಕ್ಷ ವೆಂಕಟೇಶ ಜಿ.ಕುಂದರ್, ಎಂ.ಎಸ್.ಖಾನ್, ಎಸ್ಐಒನ ಯಾಸೀನ್ ಕೋಡಿ ಬೆಂಗ್ರೆ, ಅಫ್ವಾ್ , ಸಂಜೀವಿನಿ ಒಕ್ಕೂಟದ ಯಶೋದಾ, ಜಲಜ ಬೆಲ್ಚಾಡ್ತಿ, ಎಸ್ಎಲ್ಆರ್‌ಎಂ ಘಟಕದ ಪದ್ಮಾ, ಆಶಾ ಕಿರಣ್, ಸಂತೋಷ್ ಅಂದ್ರಾದೆ ಗ್ರಾಪಂ ಸದಸ್ಯರುಗಳಾದ ನಿತ್ಯಾನಂದ ಕೆಮ್ಮಣ್ಣು, ಫೌಜಿಯಾ ಸಾದಿಕ್, ಮಹಮ್ಮದ್ ಇದ್ರೀಸ್, ಪುರಂದರ ಕುಂದರ್, ಆಶಾ, ಪ್ರಶಾಂತ್ ಕೆಮ್ಮಣ್ಣು, ಸಂಧ್ಯಾ, ಅರುಣ್ ಫೆರ್ನಾಂಡೀಸ್, ಡಾ.ಫಹಿಮ್ ಅಬ್ದುಲ್ಲಾ, ವತ್ಸಲಾ ವಿನೋದ್, ಮುಮ್ತಾಜ್, ವಿಜಯ್, ಸುಜಾನ ಡಿಸೋಜ, ಕುಸುಮ, ಜಮಿಲಾ ಸದಿದಾ, ಹೈದರ್ ಅಲಿ, ಧಿರೇಂದ್ರ, ಪ್ರತಿಭಾ, ತಾಪಂ ಸದಸ್ಯೆ ಸುಲೋಚನಾ ಮೊದಲಾದವರು ಹಾಜರಿದ್ದರು. ಗ್ರಾಪಂ ಕಾರ್ಯದರ್ಶಿ ದಿನಕರ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.







