ಕುಂದಾಪುರ: ಬಸ್‌ನಲ್ಲಿ ಮಹಿಳೆಯ ಸರ ಕಳವು
ಕುಂದಾಪುರ, ಫೆ.12: ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯ ಕತ್ತಿನಲ್ಲಿದ್ದ ಸರ ಕಳವಾಗಿರುವ ಘಟನೆ ಫೆ.11ರಂದು ನಡೆದಿದೆ. ಕಾಲ್ತೋಡು ಗ್ರಾಮದ ಮೆಟ್ಟಿನಹೊಳೆ ನಿವಾಸಿ ಲಕ್ಷ್ಮೀ(75) ಎಂಬವರು ಕಟ್ಬೇಲ್ತೂರಿನಲ್ಲಿರುವ ಮಗಳ ಮನೆಗೆ ಹೋಗಲು ಹೆಮ್ಮಾಡಿಯಿಂದ ಬಸ್ ಹತ್ತಿದ್ದು, ಕಟ್ಬೇಲ್ತೂರಿನಲ್ಲಿ ಬಸ್ ಇಳಿದು ನೋಡುವಾಗ ಕುತ್ತಿಗೆಯಲ್ಲಿದ್ದ 25 ಗ್ರಾಂ ತೂಕದ ಚಿನ್ನದ ಸರ ಕಳವಾಗಿರುವುದು ಕಂಡುಬಂತು. ಇದರ ಮೌಲ್ಯ ಸುಮಾರು 1,00,000ರೂ. ಎಂದು ಅಂದಾಜಿಸಲಾಗಿದೆ.
ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





