ಅಫ್ಘಾನ್: ವಿಶ್ವ ಸಂಸ್ಥೆಯ ಸಿಬ್ಬಂದಿಯನ್ನು ಗುರಿಯಾಗಿಸಿ ದಾಳಿ: 5 ಭದ್ರತಾ ಸಿಬ್ಬಂದಿ ಸಾವು
ಕಾಬೂಲ್ (ಅಫ್ಘಾನಿಸ್ತಾನ), ಫೆ. 12: ಅಫ್ಘಾನಿಸ್ತಾನದ ಕಾಬೂಲ್ ಪ್ರಾಂತದಲ್ಲಿ ವಿಶ್ವಸಂಸ್ಥೆಯ ಅಧಿಕಾರಿಗಳನ್ನು ಹೊತ್ತ ವಾಹನಗಳ ಸಾಲನ್ನು ಗುರಿಯಾಗಿಸಿ ಗುರುವಾರ ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ, ಅವುಗಳಿಗೆ ಬೆಂಗಾವಲು ಒದಗಿಸುತ್ತಿದ್ದ ಅಫ್ಘಾನ್ ಭದ್ರತಾ ಪಡೆಯ ಐವರು ಸಿಬ್ಬಂದಿ ಮೃತಪಟ್ಟಿದ್ದಾರೆ.
ರಾಜಧಾನಿ ಕಾಬೂಲ್‌ನ ಹೊರವಲಯದಲ್ಲಿರುವ ಸುರೊಬಿ ಜಿಲ್ಲೆಯಲ್ಲಿ ನಡೆದ ದಾಳಿಯಲ್ಲಿ ವಿಶ್ವಸಂಸ್ಥೆಯ ಯಾವುದೇ ಸಿಬ್ಬಂದಿ ಗಾಯಗೊಂಡಿಲ್ಲ ಎಂದು ಅಫ್ಘಾನಿಸ್ತಾನದಲ್ಲಿರುವ ವಿಶ್ವಸಂಸ್ಥೆಯ ತಂಡ ತಿಳಿಸಿದೆ.
‘‘ಅಫ್ಘಾನ್ ಭದ್ರತಾ ತಂಡದ ಐವರು ಸಿಬ್ಬಂದಿಯ ಸಾವಿಗೆ ವಿಶ್ವಸಂಸ್ಥೆ ಶೋಕಿಸುತ್ತದೆ. ಅಫ್ಘಾನಿಸ್ತಾನದಲ್ಲಿ ನೆಲೆಸಿರುವ ಹಿಂಸಾಚಾರ ಕೊನೆಗೊಳ್ಳಬೇಕು’’ ಎಂಬುದಾಗಿ ವಿಶ್ವಸಂಸ್ಥೆ ಮಹಾ ಕಾರ್ಯದರ್ಶಿಯ ಅಫ್ಘಾನಿಸ್ತಾನಕ್ಕಾಗಿನ ಉಪ ವಿಶೇಷ ಪ್ರತಿನಿಧಿ ರಮೀಝ್ ಅಲಕ್ಬರೊವ್ ಟ್ವೀಟ್ ಮಾಡಿದ್ದಾರೆ.
Next Story





