ಉಡುಪಿ: ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಸ್ಚಚ್ಚತಾ ಅಭಿಯಾನ

ಉಡುಪಿ, ಫೆ.13: ಉಡುಪಿ ನಗರಸಭಾ ವ್ಯಾಪ್ತಿಯ ಕರಾವಳಿ ಜಂಕ್ಷನ್‌ನಿಂದ ಬಲೈಪಾದೆವರೆಗೆ ಹಾಗೂ ಕರಾವಳಿ ಜಂಕ್ಷನ್‌ನಿಂದ ಸಂತೆಕಟ್ಟೆಯವರೆಗೆ ರಾಷ್ಟ್ರೀಯ ಹೆದ್ದಾರಿ- 66ರ ಎರಡು ಬದಿಯ ಸ್ಚಚ್ಚತಾ ಅಭಿಯಾನ ಶನಿವಾರ ಮುಂಜಾನೆ ಉಡುಪಿ ನಗರಸಭೆಯ ನೇತೃತ್ವದಲ್ಲಿ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಉಡುಪಿ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರು ಇವರು ಸ್ವಚ್ಛತಾ ಅಭಿಯಾನವನ್ನು ಉದ್ಘಾಟಿಸಿ ಮಾತನಾಡಿ ಸ್ವಚ್ಚ ಸುಂದರ ಉಡುಪಿಯನ್ನು ರೂಪಿಸಲು ಕರೆ ನೀಡಿದರು.
ನಗರಸಭೆಯ ಅಧ್ಯಕ್ಷೆ ಸುಮಿತ್ರ ಆರ್ ನಾಯಕ್, ಉಪಾಧ್ಯಕ್ಷೆ ಲಕ್ಷ್ಮೀ ಮಂಜುನಾಥ ಸಾಲಿಯಾನ್, ಸ್ಥಾಯಿ ಸಮಿತಿ ಅಧ್ಯಕ್ಷ ಗಿರೀಶ್ ಎಂ ಅಂಚನ್, ನಗರಸಬೆಯ ಸದಸ್ಯರು, ಪೌರಾಯುಕ್ತ ಉದಯ ಶೆಟ್ಟಿ, ಸಹಾಯಕ ಕಾರ್ಯಪಾಲಕ ಅಭಿಯಂತ ಮೋಹನ್ ರಾಜು, ಪರಿಸರ ಅಭಿಯಂತರ ಸ್ನೇಹ ಕೆ.ಎಸ್ ಹಾಗೂ ನಗರಸಬೆ ಅಧಿಕಾರಿಗಳು, ಸಿಬ್ಬಂದಿಗಳು ಮತ್ತು ಪೌರಕಾರ್ಮಿಕರು ಭಾಗವಹಿಸಿದ್ದರು ಎಂದು ಪೌರಾಯುಕ್ತರು ತಿಳಿಸಿದ್ದಾರೆ.

Next Story





