ಸಿಟಿ ಗೋಲ್ಡ್‌ನಿಂದ ‘ಮೆಗಾ ಮಂಗಳೂರು ಫೀಸ್ಟ್’
ಬಂಪರ್ ಡ್ರಾ ವಿಜೇತ ಮುಶ್ರತ್‌ಗೆ ಡೈಮಂಡ್ ನೆಕ್ಲೆಸ್ ವಿತರಣೆ

ಮಂಗಳೂರು, ಫೆ.13: ಪ್ರತಿಷ್ಠಿತ ಆಭರಣ ಸಂಸ್ಥೆಯಾಗಿ ಗುರುತಿಸಿಕೊಂಡಿರುವ ಸಿಟಿ ಗೋಲ್ಡ್‌ನ 20ನೇ ವಾರ್ಷಿಕೋತ್ಸವ ಪ್ರಯುಕ್ತ ನಗರದ ಕಂಕನಾಡಿ ಬೈಪಾಸ್ ರಸ್ತೆಯಲ್ಲಿನ ಸಿಟಿ ಗೋಲ್ಡ್ ಮಳಿಗೆಯಲ್ಲಿ ಬರೋಬ್ಬರಿ ಎರಡು ತಿಂಗಳುಗಳ ಕಾಲ ನಿರಂತರವಾಗಿ ಆಯೋಜಿಸಲಾದ ‘ಮೆಗಾ ಮಂಗಳೂರು ಫೀಸ್ಟ್’ನ ಕೊನೆಯ ಭಾಗವಾಗಿ ಬಂಪರ್ ಡ್ರಾ ವಿಜೇತ ಮುಶ್ರತ್ ಝಾಕಿರ್ ಕುದ್ರೋಳಿ ಅವರಿಗೆ ಡೈಮಂಡ್ ನೆಕ್ಲೆಸ್‌ನ್ನು ಕಂಕನಾಡಿಯ ಮಳಿಗೆಯಲ್ಲಿ ಶನಿವಾರ ಸಂಜೆ ವಿತರಿಸಲಾಯಿತು.
ಯೆನೆಪೊಯ ಗ್ರೂಪ್‌ನ ನಸ್ರಿನ್ ಅಬ್ದುಲ್ಲಾ ಯೆನೆಪೊಯ ಅದೃಷ್ಟಶಾಲಿ ಮುಶ್ರತ್ ಝಾಕಿರ್ ಕುದ್ರೋಳಿ ಅವರಿಗೆ ಡೈಮಂಡ್ ನೆಕ್ಲೆಸ್‌ನ್ನು ವಿತರಿಸಿ, ಗೌರವಿಸಿದರು.
ಬಳಿಕ ಮಾತನಾಡಿದ ಅವರು, ಸಂಸ್ಥೆಯು ವ್ಯಾಪಾರದ ಜೊತೆಗೆ ಸಮಾಜ ಸೇವೆಯಲ್ಲೂ ಗುರುತಿಸಿಕೊಂಡಿರುವುದು ಸ್ವಾಗತಾರ್ಹ. ಜನರ ಪ್ರೀತಿ, ವಿಶ್ವಾಸ ಗಳಿಸಲು ಸಂಸ್ಥೆಯು ಡೈಮಂಡ್ ರಿಂಗ್ ಸಹಿತ ವಿವಿಧ ಕೊಡುಗೆಗಳನ್ನು ನೀಡುತ್ತಿದೆ. ಸಂಸ್ಥೆಯು ಗ್ರಾಹಕ ಸ್ನೇಹಿಯಾಗಿ ಕೆಲಸ ಮಾಡುತ್ತಿದೆ. ವರ್ಷದಿಂದ ವರ್ಷಕ್ಕೆ ಸಂಸ್ಥೆ ಏಳಿಗೆ ಕಾಣುತ್ತಿದೆ. ಸಂಸ್ಥೆಯು ತನ್ನ ವ್ಯಾಪಾರ-ವಹಿವಾಟಿನ ಜಾಲವನ್ನು ಮತ್ತಷ್ಟು ವಿಸ್ತರಿಸುವಂತಾಗಬೇಕು ಎಂದು ಶುಭ ಹಾರೈಸಿದರು.
ಕದ್ರಿ ಮಂಜುನಾಥ ದೇವಸ್ಥಾನದ ಮಾಜಿ ಟ್ರಸ್ಟಿ ಚಂದ್ರಕಲಾ ದೀಪಕ್ ರಾವ್ ಬಂಪರ್ ಬಹುಮಾನ ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಸಿಟಿ ಗೋಲ್ಡ್ ತನ್ನದೇ ಆದ ಛಾಪು ಮೂಡಿಸಿದೆ. ವಿದ್ಯಾಭ್ಯಾಸ, ಬಡವರಿಗೆ ಸಹಾಯ ಮಾಡುತ್ತಿದ್ದಾರೆ. ಸಂಸ್ಥೆಯು ಇನ್ನಷ್ಟು ಯಶಸ್ಸು ಸಾಧಿಸಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಮಂಗಳೂರು ಮಹಾನಗರ ಪಾಲಿಕೆಯ ಸಾರ್ವಜನಿಕ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿಯ ಅಧ್ಯಕ್ಷೆ ಪೂರ್ಣಿಮಾ, ಚಿನ್ನ ಖರೀದಿಯು ಶ್ರೀಮಂತರಿಗೆ ಮಾತ್ರ ಸೀಮಿತವಾಗದೆ ಬಡವರು, ಮಧ್ಯಮ ವರ್ಗದ ಜನರಿಗೂ ಕೈಗೆಟುಕುವ ದರದಲ್ಲಿ ಯೋಜನೆ ರೂಪಿಸಿರುವುದು ಸಿಟಿ ಗೋಲ್ಡ್‌ನ ಹೆಗ್ಗಳಿಕೆಯಾಗಿದೆ. ಇಂತಹ ಯೋಜನೆಯಿಂದ ಎಲ್ಲರಿಗೂ ಚಿನ್ನಯು ಸದಾವಕಾಶವನ್ನು ಸಂಸ್ಥೆ ದೊರಕಿಸಿ ಕೊಟ್ಟಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮುಖ್ಯಅತಿಥಿಯಾಗಿ ಹಸೀನಾ ನೌಫಲ್ ಯೆನೆಪೊಯ, ವಿಶೇಷ ಅತಿಥಿಯಾಗಿ ಮನಪಾ ಸದಸ್ಯೆ ಝೀನತ್ ಶಂಶುದ್ದೀನ್ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಸಿಟಿಗೋಲ್ಡ್ ಸಂಸ್ಥೆಯ ಮ್ಯಾನೇಜರ್ ಅಹ್ಮದ್ ಹಾಫೀಝ್, ಮಾರ್ಕೆಟಿಂಗ್ ಮ್ಯಾನೇಜರ್ ಇಮ್ರಾನ್ ವಿ., ಸಂಸ್ಥೆಯ ಸಿಬ್ಬಂದಿ ಹಾಗೂ ಗ್ರಾಹಕರು ಉಪಸ್ಥಿತರಿದ್ದರು.












