ಪ್ರೇಮಿಗಳ ದಿನಕ್ಕೆ ವಿನೂತನ ಮದುವೆ ಹಮ್ಮಿಕೊಂಡ ವಾಟಾಳ್ ನಾಗರಾಜ್

ಬೆಂಗಳೂರು, ಫೆ. 13: ಪ್ರೇಮಿಗಳ ದಿನಾಚರಣೆ ಹಿನ್ನೆಲೆಯಲ್ಲಿ ನಾಳೆ(ಫೆ.14) ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಇಲ್ಲಿನ ಕಬ್ಬನ್ ಪಾರ್ಕ್‍ನಲ್ಲಿರುವ ವಿಕ್ಟೋರಿಯಾ ರಾಣಿ ಪ್ರತಿಮೆ ಬಳಿ ವಿನೂತನ ರೀತಿಯಲ್ಲಿ ಪ್ರೇಮಿಗಳ ಮದುವೆ ಕಾರ್ಯಕ್ರಮ ಹಾಗೂ ಮೆರವಣಿಗೆ ಹಮ್ಮಿಕೊಂಡಿದ್ದಾರೆ.
‘ನಮ್ಮಿಬ್ಬರ ಮದುವೆಯನ್ನು ಪರಿಸರ, ನಿಸರ್ಗ, ಪ್ರಾಣಿ ಪಕ್ಷಿಗಳ ಮೇಲೆ ಎಂದೆಂದೂ ಪ್ರೀತಿ, ವಾತ್ಸಲ್ಯವನ್ನು ಹಾಗೂ ಪ್ರೇಮವನ್ನು ತೋರುತ್ತಿದ್ದು, ನಮ್ಮ ಮದುವೆಗೆ ಎಲ್ಲರು ಬರಬೇಕು’ ಎಂದು ಆಹ್ವಾನಿಸಲಾಗಿದೆ. ನಾಳೆ ಬೆಳಗ್ಗೆ 11:30ಕ್ಕೆ ವಿನೂತನ ಮದುವೆ ನಡೆಯಲಿದೆ ಎಂದು ವಾಟಾಳ್ ಪಕ್ಷದ ಪ್ರಕಟಣೆ ತಿಳಿಸಿದೆ.
Next Story





