ಫೆ.15: ಕನ್ನಂಗಾರ್ ಮಹಿಳಾ ಶರೀಅತ್ ಕಾಲೇಜು ಕಟ್ಟಡ ಉದ್ಘಾಟನೆ
ಪಡುಬಿದ್ರಿ, ಫೆ.13: ಎಸ್‌ವೈಎಸ್ ಕನ್ನಂಗಾರ್ ಬ್ರಾಂಚ್ ಇದರ ಅಧೀನದಲ್ಲಿ ನಿರ್ಮಿಸಲ್ಪಟ್ಟ ತಝ್ಕಿಯತುನ್ನೀಸಾ ಮಹಿಳಾ ಶರೀಅತ್ ಕಾಲೇಜು ಇದರ ನೂತನ ಕಟ್ಟಡ ಉದ್ಘಾಟನಾ ಕಾರ್ಯಕ್ರಮವು ಫೆ.15ರಂದು ಬೆಳಗ್ಗೆ 10ಕ್ಕೆ ನಡೆಯಲಿದೆ. ಸಮಸ್ತ ಮುಶಾವರ ಸದಸ್ಯ ಅಸಯ್ಯಿದ್ ಆಟಕೊಯ ತಂಙಳ್ ಕುಂಬೊಳ್ ಉದ್ಘಾಟಿಸಲಿದ್ದು, ಸಯ್ಯಿದ್ ಕೊಟೇಶ್ವರ ತಂಙಳ್ ದುಆಗೈಯುವರು. ಸಂಸ್ಥೆಯ ಪ್ರಾಂಶುಪಾಲ ಯು.ಕೆ. ಮುಹಮ್ಮದ್ ಸಅದಿ ವಳವೂರು ಅಧ್ಯಕ್ಷತೆ ವಹಿಸಲಿದ್ದಾರೆ.
ಜಿಲ್ಲಾ ಸುನ್ನಿ ಸಂಯುಕ್ತ ಖಾಝಿ ಝೈನುಲ್ ಉಲಮಾ ಮಾಣಿ ಉಸ್ತಾದ್ ಸಭಾ ಕಾರ್ಯಕ್ರಮ ಉದ್ಘಾಟಿಸಲಿದ್ದು, ಕನ್ನಂಗಾರ್ ಕೇಂದ್ರ ಮಸ್ಜಿದ್ ಮುದರ್ರಿಸ್ ಮುಹಮ್ಮದ್ ಅಶ್ರಫ್ ಸಖಾಫಿ ಪ್ರಾಸ್ತಾವನೆಗೈಯ್ಯಲಿದ್ದಾರೆ.
ಮಧ್ಯಾಹ್ನ 2 ಗಂಟೆಗೆ ಹೊಲಿಗೆ ತರಬೇತಿ ಕೇಂದ್ರ ಉದ್ಘಾಟನೆ ಹಾಗೂ ಮಹಿಳಾ ಅಧ್ಯಯನ ತರಗತಿ ನಡೆಯಲಿದೆ. ರಾತ್ರಿ 7 ಗಂಟೆಗೆ ಜಲಾಲಿಯ್ಯ ರಾತೀಬ್ ಹಾಗೂ ಫಾಇಖಾ ಪ್ರಥಮ ಬಿರುದು ಪ್ರದಾನ ನಡೆಯಲಿದೆ. ಸಯ್ಯಿದ್ ಜಅಫರ್ ಸ್ವಾದೀಖ್ ತಂಙಳ್ ಕುಂಬೋಳ್ ನೇತೃತ್ವ ವಹಿಸಲಿದ್ದಾರೆ ಎಂದು ಸಂಸ್ಥೆಯ ಕನ್ವೀನರ್ ಹನೀಫ್ ಹಾಜಿ ಕನ್ನಂಗಾರ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.





