ದ್ವಿತೀಯ ಟೆಸ್ಟ್: ಭಾರತ 329 ರನ್ ಗೆ ಆಲೌಟ್
ರಿಷಭ್ ಪಂತ್ ಅಜೇಯ ಅರ್ಧಶತಕ, ಅಲಿಗೆ 4 ವಿಕೆಟ್

ಚೆನ್ನೈ:ಇಂಗ್ಲೆಂಡ್ ವಿರುದ್ಧ ಇಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ನ ಎರಡನೇ ದಿನದಾಟವಾದ ರವಿವಾರ ಭಾರತ ತಂಡ ಬೆಳಗ್ಗಿನ ಅವಧಿಯಲ್ಲಿ ಮೊದಲ ಇನಿಂಗ್ಸ್ ನಲ್ಲಿ 329 ರನ್ ಗೆ ಆಲೌಟಾಗಿದೆ.
ಇಂಗ್ಲೆಂಡ್ ಪರವಾಗಿ ಸ್ಪಿನ್ನರ್ ಮೊಯಿನ್ ಅಲಿ(4-128) ಯಶಸ್ವಿ ಬೌಲರ್ ಎನಿಸಿಕೊಂಡರು. ಒಲ್ಲಿ ಸ್ಟೋನ್(3-47)ಹಾಗೂ ಜಾಕ್ ಲೀಚ್ (2-78)ತಲಾ ಎರಡು ವಿಕೆಟ್ ಪಡೆದರು.
ಭಾರತ ಶನಿವಾರ ಮೊದಲ ದಿನದಾಟದಂತ್ಯಕ್ಕೆ 6 ವಿಕೆಟ್ ನಷ್ಟಕ್ಕೆ 300 ರನ್ ಗಳಿಸಿತ್ತು. ಇಂದು ನಿನ್ನೆಯ ಮೊತ್ತಕ್ಕೆ 29 ರನ್ ಸೇರಿಸುವಷ್ಟರಲ್ಲಿ ಉಳಿದ 4 ವಿಕೆಟ್ ಗಳನ್ನು ಕಳೆದುಕೊಂಡಿತು. ಅಕ್ಷರ್ ಪಟೇಲ್ ನಿನ್ನೆಯ ಸ್ಕೋರ್ ಗೆ ಒಂದೂ ರನ್ ಸೇರಿಸದೆ 5 ರನ್ ಗಳಿಸಿ ಮೊಯಿನ್ ಅಲಿಗೆ ವಿಕೆಟ್ ಒಪ್ಪಿಸಿದರು.
ವಿಕೆಟ್ ಕೀಪರ್-ಬ್ಯಾಟ್ಸ್ ಮನ್ ರಿಷಭ್ ಪಂತ್ ಔಟಾಗದೆ 58 ರನ್(77 ಎಸೆತ, 7 ಬೌಂಡರಿ, 3 ಸಿಕ್ಸರ್)ಗಳಿಸಿದರು. ಅವರಿಗೆ ಬಾಲಂಗೋಚಿಗಳು ಸಾಥ್ ನೀಡಲು ವಿಫಲರಾದರು.
Next Story





