ಅಡ್ಡಹೊಳೆ ಅಪಘಾತ ಪ್ರಕರಣ: ಓರ್ವ ಗಾಯಾಳು ಮೃತ್ಯು

ನೆಲ್ಯಾಡಿ, ಫೆ.14: ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಅಡ್ಡಹೊಳೆಯಲ್ಲಿ ಕೆಎಸ್ಸಾರ್ಟಿಸಿ ಬಸ್ ಹಾಗೂ ಕಾರು ನಡುವೆ ಶನಿವಾರ ಸಂಭವಿಸಿದ ಅಪಘಾತದ ಗಾಯಾಳುಗಳ ಪೈಕಿ ಮಹಿಳೆಯೊಬ್ಬರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಕೊಕ್ಕಡ ಪಟ್ರಮೆ ನಿವಾಸಿ ಮರಿಯಮ್ಮ(59) ಮೃತಪಟ್ಟವರು. ನಿನ್ನೆ ಸಂಭವಿಸಿದ ಈ ಅಪಘಾತದಲ್ಲಿ ಮರಿಯಮ್ಮ ಸೇರಿದಂತೆ ಕಾರಿನಲ್ಲಿದ್ದ ಏಳು ಮಂದಿ ಗಾಯಗೊಂಡಿದ್ದರು. ಈ ಪೈಕಿ ಮರಿಯಮ್ಮ ಗಂಭೀರ ಗಾಯಗೊಂಡಿದ್ದರು.
Next Story





