Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಆದಿತ್ಯನಾಥ್ ಪ್ರಧಾನಿಯಾದರೆ ಭಾರತವು...

ಆದಿತ್ಯನಾಥ್ ಪ್ರಧಾನಿಯಾದರೆ ಭಾರತವು ಏನನ್ನು ನಿರೀಕ್ಷಿಸಬಹುದು?

ರಾಮಚಂದ್ರ ಗುಹಾ-scroll.inರಾಮಚಂದ್ರ ಗುಹಾ-scroll.in14 Feb 2021 8:11 PM IST
share
ಆದಿತ್ಯನಾಥ್ ಪ್ರಧಾನಿಯಾದರೆ ಭಾರತವು ಏನನ್ನು ನಿರೀಕ್ಷಿಸಬಹುದು?

2020ನೇ ಸಾಲಿನಲ್ಲಿ ಮೂರು ವಿಷಯಗಳು ಪ್ರಾಮುಖ್ಯವನ್ನು ಪಡೆದಿದ್ದವು. ಕೊರೋನವೈರಸ್ ಸಾಂಕ್ರಾಮಿಕವು ಒಡ್ಡಿದ್ದ ಬೆದರಿಕೆ,ಆರ್ಥಿಕತೆಯ ದುಃಸ್ಥಿತಿ ಮತ್ತು ಚೀನಾದೊಂದಿಗೆ ಗಡಿ ಬಿಕ್ಕಟ್ಟು ಇವು ಈ ಮೂರು ವಿಷಯಗಳಾಗಿದ್ದವು. ಭಾರತದಲ್ಲಿ ಮಾಧ್ಯಮಗಳು ಮತ್ತು ಸಾಮಾನ್ಯ ಜನರು ರಾಜಕೀಯದ ಗೀಳು ಹೊಂದಿದ್ದಾರೆ,ಆದರೆ 2020ರಲ್ಲಿ ರಾಜಕೀಯವು ಹಿಂದಿನ ಸಾಲಿಗೆ ಸರಿದಿದ್ದು, ಆರೋಗ್ಯ, ಆರ್ಥಿಕತೆ ಮತ್ತು ರಕ್ಷಣೆ ಇವು ಮುಂಚೂಣಿಯಲ್ಲಿದ್ದವು.

ಆದಾಗ್ಯೂ ಕಳೆದ ವರ್ಷ ಭಾರತೀಯ ರಾಜಕೀಯದಲ್ಲಿ ನಮ್ಮ ಪ್ರಜಾಪ್ರಭುತ್ವದ ಮೇಲೆ ಗಾಢ ಮತ್ತು ಆತಂಕಕಾರಿ ಪರಿಣಾಮಗಳನ್ನು ಬೀರಬಹುದಾದ ಪ್ರಮುಖ ಬೆಳವಣಿಗೆಯೊಂದು ನಡೆದಿದೆ. ಅದು ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಅವರು ಬಿಜೆಪಿಯಲ್ಲಿ ಪ್ರಮುಖ ಮುಖವಾಗಿ ಹೊರಹೊಮ್ಮಿದ್ದು.
  
ಬಿಜೆಪಿಯು 2024ರಲ್ಲಿ ಸತತವಾಗಿ ಮೂರನೇ ಬಾರಿಗೆ ಸಾರ್ವತ್ರಿಕ ಚುನಾವಣೆಯಲ್ಲಿ ಗೆಲುವು ಸಾಧಿಸಿದರೆ ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ಪ್ರಧಾನಿಯಾಗಿ ನರೇಂದ್ರ ಮೋದಿಯವರ ಉತ್ತರಾಧಿಕಾರಿಯಾಗುವ ಹೆಚ್ಚಿನ ಸಾಧ್ಯತೆ ಇರುವಂತೆ 2019ರ ಅಂತ್ಯದಲ್ಲಿ ಕಂಡು ಬಂದಿತ್ತು. ಶಾ ಹೆಚ್ಚುಕಡಿಮೆ ಕಳೆದೆರಡು ದಶಕಗಳಿಂದ ಮೋದಿಯವರ ಬಲಗೈ ಬಂಟರಾಗಿದ್ದಾರೆ. ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸುವ ಮತ್ತು ಪೌರತ್ವ (ತಿದ್ದುಪಡಿ) ಕಾಯ್ದೆಯು ಅಂಗೀಕಾರಗೊಳ್ಳುವಂತೆ ಮಾಡುವ ಮೂಲಕ ಅವರು ಮೋದಿಯವರ ಉತ್ತರಾಧಿಕಾರಿಯಾಗಿ ತನ್ನ ಸ್ಥಾನವನ್ನು ಭದ್ರಗೊಳಿಸಿಕೊಳ್ಳುತ್ತಿರುವಂತೆ ಕಂಡು ಬಂದಿತ್ತು. ಇದಕ್ಕೆ ಮೋದಿಯವರ ಒಪ್ಪಿಗೆಯೂ ಇದ್ದಂತಿತ್ತು.

 ಶಾರನ್ನು ಹಿಂದಿಕ್ಕುತ್ತಿರುವ ಆದಿತ್ಯನಾಥ್ ಶಾ ಮೋದಿಯವರ ಉತ್ತರಾಧಿಕಾರಿಯಾಗಲು ಅಗ್ರಸ್ಥಾನದಲ್ಲಿದ್ದಾರೆ ಎನ್ನುವುದು 2020ರ ಆರಂಭದಲ್ಲಿಯ ಸಾಮಾನ್ಯ ಅಭಿಪ್ರಾಯವಾಗಿತ್ತು. ಆದರೆ ಒಂದು ವರ್ಷದ ಬಳಿಕ ಈ ಸಾಧ್ಯತೆ ಕಡಿಮೆಯಾಗಿರುವಂತಿದೆ. ಬಿಜೆಪಿಯ ಹಿರಿಯ ನಾಯಕರೇ ಗುರುತಿಸಿರುವಂತೆ ಆದಿತ್ಯನಾಥ್ ಪಕ್ಷದಲ್ಲಿ ಹೆಚ್ಚಿನವರು ಎದುರುನೋಡುತ್ತಿರುವ ವ್ಯಕ್ತಿಯಾಗಿದ್ದಾರೆ. ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ ಸಿಂಗ್ ಚೌಹಾಣ್ ಮತ್ತು ಕರ್ನಾಟಕದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಆದಿತ್ಯನಾಥ್ ಅವರ ಅನುಕರಣೆಯೊಂದಿಗೆ ತಮ್ಮ ಸ್ವಂತ ರಾಜ್ಯಗಳಲ್ಲಿ ಹಿಂದು-ಮುಸ್ಲಿಂ ಮದುವೆಗಳ ವಿರುದ್ಧ ಕಾನೂನನ್ನು ತರಲು ಎಷ್ಟೊಂದು ತರಾತುರಿಯಿಂದ ಮುಂದಾಗಿದ್ದಾರೆ ನೋಡಿ.

ಶಾ ಮತ್ತು ಮೋದಿಯವರಂತಹ ಕಟ್ಟರ್ವಾದಿಗಳಿಗೆ ಹೋಲಿಸಿದರೆ ಮೃದು ಮತ್ತು ಹೊಂದಿಕೊಳ್ಳುವ ಸ್ವಭಾವದ ನಾಯಕರೆಂದು ಪರಿಗಣಿಸಲ್ಪಟಿದ್ದ ಚೌಹಾಣ್ ಮತ್ತು ಯಡಿಯೂರಪ್ಪ ಒಂದು ಸಮಯದಲ್ಲಿ ವಾಜಪೇಯಿಯವರ ಕಾಲವನ್ನು ನೆನಪಿಸಿದ್ದರು. ಸಂಪೂರ್ಣ ಧರ್ಮಾಂಧತೆಗಾಗಿ ಹೊಂದಾಣಿಕೆ ಮಾಡಿಕೊಳ್ಳುವದರಲ್ಲಿಯೇ ತಮ್ಮ ರಾಜಕೀಯ ಅಸ್ತಿತ್ವವಿದೆ ಎಂಬ ನಂಬಿಕೆಯೊಂದಿಗೆ ಈ ಇಬ್ಬರೂ ನಾಯಕರು ಈಗ ಆದಿತ್ಯನಾಥರ ಅನುಕರಣೆ ಮಾಡುತ್ತಿದ್ದಾರೆ.
 
2012-2013ರಲ್ಲಿ ಮೋದಿಯವರು ಪ್ರಧಾನಿಯಾಗುವ ತನ್ನ ಮಹತ್ವಾಕಾಂಕ್ಷೆಯನ್ನು ಪ್ರಕಟಿಸಿದಾಗ ಅವರು ‘ಗುಜರಾತ್ ಮಾದರಿ’ಯ ಬಗ್ಗೆ ಮಾತನಾಡಿದ್ದರು ಮತ್ತು ಅದನ್ನು ದೇಶಾದ್ಯಂತ ಜಾರಿಗೊಳಿಸಲು ಬಯಸಿದ್ದರು. ಗುಜರಾತ್ ಮಾದರಿಯು ಪ್ರಗತಿಪರ,‌ ಪುರೋಗಾಮಿ ಆರ್ಥಿಕ ಮತ್ತು ಸಾಮಾಜಿಕ ದೃಷ್ಟಿಯನ್ನು ಪ್ರತಿನಿಧಿಸುತ್ತಿದೆ ಎಂದು ಅವರು ಹೇಳಿಕೊಂಡಿದ್ದರಾದರೂ ಅವರ ಟೀಕಾಕಾರರು ಮುಸ್ಲಿಮರ ಕಡೆಗಣಿಸುವಿಕೆ ಮತ್ತು ಭಿನ್ನಾಭಿಪ್ರಾಯಗಳ ಬಗ್ಗೆ ಅಸಹಿಷ್ಣುತೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿಯಾಗಿ ಅವರ ಅಧಿಕಾರಾವಧಿಯ ಕರಾಳ ಮುಖವನ್ನು ಬೆಟ್ಟು ಮಾಡಿದ್ದರು.

ಆದಿತ್ಯನಾಥ ಈವರೆಗೆ ತಾನು ಭಾರತದಾದ್ಯಂತ ಅನುಷ್ಠಾನಿಸುವ ‘ಉತ್ತರ ಪ್ರದೇಶ ಮಾದರಿ ’ಯ ಬಗ್ಗೆ ಸ್ಪಷ್ಟವಾಗಿ ಹೇಳಿಕೊಂಡಿಲ್ಲ. ಆದರೆ ಅವರು ಈವರೆಗೆ ತನ್ನ ರಾಜ್ಯದಲ್ಲಿ ಏನನ್ನು ಮಾಡಿದ್ದಾರೆಯೋ ಅದರ ಆಧಾರದಲ್ಲಿ ಅವರ ಉತ್ತರ ಪ್ರದೇಶ ಮಾದರಿ ಏನನ್ನು ಪ್ರತಿನಿಧಿಸಲಿದೆ ಎನ್ನುವುದನ್ನು ನಾವು ಸುಮಾರಿಗೆ ಅಂದಾಜಿಸಬಹುದು.

ಅಂದ ಹಾಗೆ ಮೋದಿ ಮತ್ತು ಆದಿತ್ಯನಾಥ್ ನಡುವೆ ಗಮನಾರ್ಹ ಹೋಲಿಕೆಗಳಿವೆ. ಇಬ್ಬರೂ ಸರ್ವಾಧಿಕಾರಿ ವ್ಯಕ್ತಿತ್ವದ ಆದರ್ಶ ಉದಾಹರಣೆಗಳಾಗಿದ್ದಾರೆ. ಇಬ್ಬರೂ ತಮ್ಮ ಇಚ್ಛೆಯನ್ನು ಸಂಪುಟ ಸಹೋದ್ಯೋಗಿಗಳು, ಶಾಸಕಾಂಗ, ಅಧಿಕಾರಿಗಳು, ವೈಜ್ಞಾನಿಕ ತಜ್ಞರು, ಮಾಧ್ಯಮಗಳು ಅಥವಾ ಸಾರ್ವಜನಿಕರು ಸೇರಿದಂತೆ ತಮ್ಮ ಸುತ್ತಲಿನವರ ಮೇಲೆ ಹೇರಲು ಬಯಸುತ್ತಾರೆ. ಸಾಧನೆಗಳು,ಅವು ನಿಜವಾಗಿದ್ದಿರಲಿ ಅಥವಾ ಕಲ್ಪಿತವಾಗಿರಲಿ,‌ ಅವುಗಳ ಎಲ್ಲ ಹೆಗ್ಗಳಿಕೆಯೂ ತಮಗೇ ದೊರೆಯಬೇಕು ಎನ್ನುವ ಮನೋಭಾವದವರಾಗಿದ್ದಾರೆ.
ಆದಾಗ್ಯೂ ಇಬ್ಬರ ನಡುವೆ ಕೆಲವು ಪ್ರಮುಖ ವ್ಯತ್ಯಾಸಗಳೂ ಇವೆ. 

ಮೋದಿಯವರಿಗೆ ಹೋಲಿಸಿದರೆ ಆದಿತ್ಯನಾಥ್ ಕಟ್ಟರ್ ಹಿಂದುತ್ವವಾದಿಯಾಗಿದ್ದಾರೆ. ಮೋದಿ ಕೆಲವೊಮ್ಮೆ ಧರ್ಮವನ್ನು ಪರಿಗಣಿಸದೆ ಪ್ರತಿಯೊಬ್ಬರ ಪರವಾಗಿ ಮಾತನಾಡುತ್ತಾರೆ (ಸಬ್ಕಾ ಸಾಥ್ ಸಬ್ಕಾ ವಿಕಾಸ, ಪ್ರೊಗ್ರೆಸ್ ಫಾರ್ ಆಲ್). ಕೆಲವೊಮ್ಮೆ ಮೆಟ್ರೋ ರೈಲಿನಲ್ಲಿ ಮುಸ್ಲಿಮರೊಂದಿಗೆ ಸಂಚರಿಸುವ ಫೋಟೊಗಳನ್ನೂ ತೆಗೆಸಿಕೊಳ್ಳುತ್ತಾರೆ. ಆದಿತ್ಯನಾಥ್ ಇಂತಹ ಇಬ್ಬಂದಿತನವನ್ನು ತೋರಿಸಿಲ್ಲ. ಭಾರತದಲ್ಲಿ ಇತರ ಧರ್ಮೀಯರಿಗಿಂತ,ವಿಶೇಷವಾಗಿ ಮುಸ್ಲಿಮರಿಗಿಂತ ಹಿಂದುಗಳು ಪರಮೋಚ್ಚರಾಗಿದ್ದಾರೆ ಎನ್ನುವುದನ್ನು ಅವರು ತನ್ನ ಮಾತುಗಳಲ್ಲಿ ಮತ್ತು ಕೃತಿಗಳಲ್ಲಿ ಸ್ಪಷ್ಟಪಡಿಸಿದ್ದಾರೆ.

ಟೀಕಾಕಾರರ ದಮನ
ಮೋದಿ ಮುಖ್ಯಮಂತ್ರಿಯಾಗಿ ಗುಜರಾತಿನಲ್ಲಿ ತನ್ನ ಟೀಕಾಕಾರರನ್ನು ದಮನಿಸಲು ಮತ್ತು ಅವರ ಧ್ವನಿಯನ್ನಡಗಿಸಲು ಪೊಲೀಸರನ್ನು ಮತ್ತು ಕಾನೂನನ್ನು ಬಳಸಿಕೊಂಡಿದ್ದರು. ಉತ್ತರ ಪ್ರದೇಶದಲ್ಲಿ ಸಿಎಎ ವಿರುದ್ಧ ಶಾಂತಿಯುತ ಪ್ರತಿಭಟನೆಗಳನ್ನು ಕ್ರೂರವಾಗಿ ದಮನಿಸುವಲ್ಲಿ ಕಂಡು ಬಂದಿರುವಂತೆ ಆದಿತ್ಯನಾಥರು ತನ್ನ ರಾಜ್ಯದಲ್ಲಿ ಅದನ್ನೇ ಮಾಡುತ್ತಿದ್ದಾರೆ.

ಆದರೆ ಭಾರತದಲ್ಲಿ ಎಲ್ಲಿಯೂ ಟೀಕಾಕಾರರ ವಿರುದ್ಧ ದಾಳಿಗೆ ತನ್ನ ಪೊಲೀಸರನ್ನು ಬಳಸಿಕೊಳ್ಳುವ ಮೂಲಕ ಆದಿತ್ಯನಾಥ ಮೋದಿಯವರು ಮುಖ್ಯಮಂತ್ರಿಯಾಗಿ ಏನನ್ನು ಮಾಡಿದ್ದರೋ ಅದಕ್ಕಿಂತ ಒಂದು ಹೆಜ್ಜೆ ಮುಂದೆಯೇ ಇದ್ದಾರೆ. ಇತರ ರಾಜ್ಯಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪತ್ರಕರ್ತರು ಮತ್ತು ವಿಡಂಬನಾಕಾರರ ವಿರುದ್ಧ ಉತ್ತರ ಪ್ರದೇಶದಲ್ಲಿ ಸರಣಿ ಎಫ್ಐಆರ್ಗಳು ದಾಖಲಾಗಿರುವುದು ಆದಿತ್ಯನಾಥ ಮೋದಿಗಿಂತ ಹೆಚ್ಚು ಸರ್ವಾಧಿಕಾರಿಯಾಗಿದ್ದಾರೆ ಎನ್ನುವುದನ್ನು ತೋರಿಸುತ್ತಿದೆ.

ಇನ್ನೂ ಖಚಿತವಾಗಿ ಹೇಳಬೇಕೆಂದರೆ ಆದಿತ್ಯನಾಥರ ಸ್ವಂತ ರಾಜ್ಯದ ಜನರೇ ಅವರ ದಬ್ಬಾಳಿಕೆ ಮತ್ತು ಬಲವಂತದ ನೀತಿಗಳ ಬಿಸಿಯನ್ನು ಅನುಭವಿಸಿದ್ದಾರೆ. ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಆದಿತ್ಯನಾಥರ ಆಯ್ಕೆಯು ಮುಸ್ಲಿಮರನ್ನು ಮತ್ತು ರಾಜಕೀಯ ಭಿನ್ನಮತೀಯರನ್ನು ಬಹಿರಂಗವಾಗಿ ಮತ್ತು ನಿಸ್ಸಂದೇಹವಾಗಿ ಸಾರ್ವಜನಿಕ ಶತ್ರುಗಳನ್ನಾಗಿ ಗುರಿಯಾಗಿಸುವ ಆಡಳಿತದ ಮಾದರಿಗೆ ಒಪ್ಪಿಗೆಯ ಮುದ್ರೆಯನ್ನೊತ್ತುವ ಮೂಲಕ ಭಾರತೀಯ ಪ್ರಜಾಪ್ರಭುತ್ವದಲ್ಲಿ ಬಿಜೆಪಿಯ ಮುನ್ನಡೆಯಲ್ಲಿ ಮಹತ್ವದ ಐತಿಹಾಸಿಕ ಗಳಿಗೆಯಾಗಿತ್ತು ಎಂದು ಜಾಲತಾಣ ‘ಆರ್ಟಿಕಲ್14 ಡಾಟ್ ಕಾಮ್’ನಲ್ಲಿಯ ಲೇಖನವೊಂದು ಬೆಟ್ಟು ಮಾಡಿದೆ.

ಆದಿತ್ಯನಾಥ್ ಅವರು ಅಧಿಕಾರ ವಹಿಸಿಕೊಂಡ ಮೊದಲ ದಿನದಿಂದಲೇ ತನ್ನ ಪ್ರಖರ ಹಿಂದುತ್ವವನ್ನು ಪ್ರದರ್ಶಿಸಿದ್ದಾರೆ. ತಥಾಕಥಿತ ಹಿಂದುತ್ವ ರಕ್ಷಕರಿಗೆ ರಕ್ಷಣೆ ಒದಗಿಸಲು ಮತ್ತು ಹಿಂದುಗಳನ್ನು,‌ ವಿಶೇಷವಾಗಿ ಮೇಲ್ಜಾತಿಗಳಿಗೆ ಸೇರಿದವರನ್ನು ಪರಮೋಚ್ಚರೆಂದು ಬಿಂಬಿಸಲು ಸರಕಾರಿ ಯಂತ್ರವನ್ನು ಬಳಸಲು ಅವರೆಂದೂ ಹಿಂಜರಿದಿಲ್ಲ. ಮುಸ್ಲಿಮರನ್ನು ಮತ್ತು ಟೀಕಾಕಾರರನ್ನು ಗುರಿಯಾಗಿಸಿಕೊಳ್ಳಲು, ದಂಡಿಸಲು, ಅವಮಾನಿಸಲು,ಜೈಲಿಗೆ ಹಾಕಲು ಮತ್ತು ಕೆಲವು ಪ್ರಕರಣಗಳಲ್ಲಿ ಮುಸ್ಲಿಮರನ್ನು ಕೊಲ್ಲಲೂ ಅವರು ಕಾನೂನು ಮತ್ತು ಪೊಲೀಸರನ್ನು ಬಳಸಿಕೊಳ್ಳಲು ಹಿಂದೇಟು ಹೊಡೆದಿಲ್ಲ ಎಂದೂ ಈ ಲೇಖನವು ಹೇಳಿದೆ.

ಸರಕಾರದಿಂದ ಕಾನೂನುಬಾಹಿರ ಹತ್ಯೆಗಳ ಮತ್ತು ಮುಸ್ಲಿಮರು ಹಾಗೂ ಸಾಮಾಜಿಕ ಹೋರಾಟಗಾರರನ್ನು ಅದು ಗುರಿಯಾಗಿಸಿಕೊಂಡಿರುವ ಬಗ್ಗೆ ಹಲವಾರು ನಿದರ್ಶನಗಳನ್ನು ನೀಡಿರುವ ಲೇಖನವು ಅಂತ್ಯದಲ್ಲಿ,ಆದಿತ್ಯನಾಥ ಸರಕಾರವು ಪ್ರತೀಕಾರದ, ಬಹುಸಂಖ್ಯಾತರ ಪರ ಮತ್ತು ದಬ್ಬಾಳಿಕೆಯ ಆಡಳಿತದ ಮೂಲಕ ಹಿಂದಿನ ಬಿಜೆಪಿ ಆಡಳಿತಗಳು ಉಲ್ಲಂಘಿಸಲು ಹಿಂಜರಿದಿದ್ದ ಎಲ್ಲ ಮಿತಿಗಳನ್ನೂ ದಾಟಿದೆ ಎಂದು ಹೇಳಿದೆ.
 
ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗುವುದಕ್ಕೆ ಬಹಳ ವರ್ಷಗಳ ಹಿಂದೆಯೇ ಆದಿತ್ಯನಾಥ್ ಅವರು ‘ಹಿಂದುತ್ವ ಮತ್ತು ರಾಷ್ಟ್ರವಾದಕ್ಕೆ ಮುಡಿಪಾಗಿರುವ ಪ್ರಬಲ ಸಾಂಸ್ಕೃತಿಕ ಮತ್ತು ಸಾಮಾಜಿಕ ಸಂಘಟನೆ ’ಎಂದು ತನ್ನನ್ನು ತಾನು ಬಣ್ಣಿಸಿಕೊಳ್ಳುವ ಹಿಂದು ಯುವ ವಾಹಿನಿಯನ್ನು ಸ್ಥಾಪಿಸಿದ್ದರು. ಹಿಂಸಾಚಾರಕ್ಕೆ ಹಿಂಜರಿಯದ ಈ ಗುಂಪು ದಂಗೆಗಳನ್ನು ಪ್ರಚೋದಿಸಿದ,ಕೊಲೆಗಳು ಮತ್ತು ಬೆಂಕಿ ಹಚ್ಚುವಿಕೆಯ ಆರೋಪಗಳನ್ನು ಎದುರಿಸಿದೆ. ಮಸೀದಿಗಳು,ಮನೆಗಳು,ಬಸ್ ಗಳು ಮತ್ತು ರೈಲುಗಳಿಗೆ ಬೆಂಕಿ ಹಚ್ಚಿದ ಆರೋಪಗಳನ್ನು ಈ ಸಂಘಟನೆಯು ಹೊತ್ತಿದೆ.

ಹಿಂದು ಯುವವಾಹಿನಿಯ ಕಾರ್ಯಕರ್ತರು ಆದಿತ್ಯನಾಥರ ಬಗ್ಗೆ ಅತೀವ ನಿಷ್ಠೆಯನ್ನು ಹೊಂದಿದ್ದಾರೆ ಮತ್ತು ಅವರ ಆದೇಶಗಳನ್ನು ಪಾಲಿಸಲು ಸದಾ ಸಿದ್ಧರಿದ್ದಾರೆ. ಹೀಗೆ ಆದಿತ್ಯನಾಥ್ ಅವರು ಮುಖ್ಯಮಂತ್ರಿಯಾಗುವುದಕ್ಕೆ ಎಷ್ಟೋ ವರ್ಷಗಳ ಮೊದಲು ಹಿಂದುತ್ವ ಗುಂಪೊಂದನ್ನು ಸ್ಥಾಪಿಸಿ,ಅದನ್ನು ನಡೆಸಿಕೊಂಡು ಬಂದಿರುವ ಏಕೈಕ ಭಾರತೀಯ ರಾಜಕಾರಣಿಯಾಗಿದ್ದಾರೆ.

ಹಿಂದುಳಿದಿರುವಿಕೆಗೆ ಪರ್ಯಾಯ ಶಬ್ದ
 
ಮೋದಿಯವರು 2001ರಲ್ಲಿ ಗುಜರಾತಿನ ಮುಖ್ಯಮಂತ್ರಿಯಾದಾಗ ರಾಜ್ಯವು ಅದಾಗಲೇ ಕೈಗಾರಿಕಾ ಮತ್ತು ಉದ್ಯಮರಂಗದಲ್ಲಿ ಗಣನೀಯ ಪ್ರಗತಿಯನ್ನು ಸಾಧಿಸಿತ್ತು. ಆದಿತ್ಯನಾಥ್ 2017ರಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗುವ ಮೊದಲು ರಾಜ್ಯವು ಇವೆರಡೂ ರಂಗಗಳಲ್ಲಿ ನಗಣ್ಯವಾಗಿತ್ತು. ಭಾರತದ ಅತ್ಯಂತ ಹೆಚ್ಚಿನ ಜನಸಂಖ್ಯೆಯ ರಾಜ್ಯವು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದಿರುವಿಕೆಗೆ ಪರ್ಯಾಯ ಶಬ್ದವಾಗಿತ್ತು ಮತ್ತು ಆದಿತ್ಯನಾಥರ ರಾಜಕೀಯವು ಈ ಕುಖ್ಯಾತಿಯನ್ನು ನಿವಾರಿಸಲು ಯಾವುದೇ ಪ್ರಯತ್ನವನ್ನು ಮಾಡಿಲ್ಲ.
 
ಇದು ಬಿಜೆಪಿಯ ಅತ್ಯುನ್ನತ ನಾಯಕನಾಗಿ ನರೇಂದ್ರ ಮೋದಿಯವರ ಸಂಭಾವ್ಯ ಉತ್ತರಾಧಿಕಾರಿ ಎಂದು ಹೇಳಲಾಗುತ್ತಿರುವ ಧುರೀಣನ ವೈಯಕ್ತಿಕ ಮತ್ತು ರಾಜಕೀಯ ದಾಖಲೆಯಾಗಿದೆ. ಆದಿತ್ಯನಾಥ ಅವರು ನಿಜಕ್ಕೂ ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ತನ್ನ ಪಕ್ಷದ ಪ್ರಚಾರದ ನೇತೃತ್ವವನ್ನು ವಹಿಸಿಕೊಂಡರೆ ಅವರು ಮತದಾರರಿಗೆ ಯಾವ ರೀತಿಯ ‘ಅಚ್ಛೇ ದಿನ್’ಗಳ ಭರವಸೆಯನ್ನು ನೀಡಲಿದ್ದಾರೆ? 2013-14ರಲ್ಲಿ ಚುನಾವಣೆಗಳಿಗೆ ಮುನ್ನ ಮೋದಿಯವರು ತಾನು ಭಾರತದ ಯುವಜನತೆಗೆ ಉದ್ಯೋಗಗಳು,‌ ಸಮೃದ್ಧಿ ಮತ್ತು ಭದ್ರತೆಯನ್ನೊದಗಿಸುವುದಾಗಿ ಹೇಳಿಕೊಂಡಿದ್ದರು. ಹಿಂದು ಯುವ ವಾಹಿನಿಯ ಸ್ಥಾಪಕರು ಇತರ ಧರ್ಮಗಳ ಜನರಿಗೆ ಕಿರುಕುಳ ಮತ್ತು ಧಾರ್ಮಿಕ ಕಿರುಕುಳದ ಹೊರತು ಬೇರೆ ಯಾವುದಾದರೂ ಭರವಸೆಯನ್ನು ಯುವ ಭಾರತೀಯರಿಗೆ ನೀಡಬಲ್ಲರೇ?

ಕೆಲವು ತಿಂಗಳುಗಳ ಹಿಂದೆ ಹಿಂದಿನ ಮತ್ತು ಹಾಲಿ ಪ್ರಧಾನಿಗಳ ರಾಜಕೀಯ ಶೈಲಿಗಳ ಕುರಿತು ಅಂಕಣ ಬರಹವೊಂದರಲ್ಲಿ ಮೋದಿಯವರು ಸ್ವಕೇಂದ್ರೀಕರಣ ಮತ್ತು ನಿಯಂತ್ರಣಗಳ ತನ್ನ ಪ್ರವೃತ್ತಿಯಲ್ಲಿ ‘ಸ್ಟಿರಾಯ್ಡ್ (ಉದ್ದೀಪಕ)ಗಳ ಮೇಲಿರುವ ಇಂದಿರಾ ಗಾಂಧಿ’ಆಗಿದ್ದಾರೆ ಎಂದು ನಾನು ಪ್ರತಿಪಾದಿಸಿದ್ದೆ. ಆದಿತ್ಯನಾಥ್ ಏನಾದರೂ ಪ್ರಧಾನಿಯಾದರೆ ಅವರು ‘ಸ್ಟಿರಾಯ್ಡಿಗಳ ಮೇಲಿರುವ ನರೇಂದ್ರ ಮೋದಿ ’ಆಗುವ ಹೆಚ್ಚಿನ ಸಾಧ್ಯತೆಯಿದೆ.

ಏಳು ವರ್ಷಗಳ ಕಾಲ ದೇಶಾದ್ಯಂತ ಗುಜರಾತ ಮಾದರಿಯ ಅನುಷ್ಠಾನವು ಪ್ರಜಾಪ್ರಭುತ್ವದ ಸಾಮಾಜಿಕ ಮತ್ತು ಸಾಂಸ್ಥಿಕ ಸ್ವರೂಪಕ್ಕೆ ತೀವ್ರ ಹಾನಿಯನ್ನುಂಟು ಮಾಡಿದೆ. ‘ಉತ್ತರ ಪ್ರದೇಶ ಮಾದರಿ ’ ಅದನ್ನು ಸಂಪೂರ್ಣವಾಗಿ ನಾಶಗೊಳಿಸಬಹುದು.

share
ರಾಮಚಂದ್ರ ಗುಹಾ-scroll.in
ರಾಮಚಂದ್ರ ಗುಹಾ-scroll.in
Next Story
X