ವ್ಯಕ್ತಿ, ಸಮಾಜ ಕಲ್ಯಾಣ ದಾಸ, ವಚನ ಸಾಹಿತ್ಯದ ಗುರಿ: ಡಾ.ಸರಸ್ವತಿ
ಮಂಗಳೂರು, ಫೆ.14: ವಚನಗಾರರು ಕಾಯಕದ ಜತೆಗೆ ಸೀಯರ ಸ್ವಾತಂತ್ರ್ಯಕ್ಕೆ ಕೊಟ್ಟ ಗೌರವ, ಸಮಾನತೆ, ಮತ್ತವರ ಪ್ರತಿಷ್ಠೆಯನ್ನು ಎತ್ತಿ ತೋರಿಸುವ ಕೆಲಸವನ್ನು ಮಾಡಿದ್ದಾರೆ ಎಂದು ಸಂತ ಅಲೋಶಿಯಸ್ ಕಾಲೇಜಿನ ಪ್ರಾಧ್ಯಾಪಕಿ ಡಾ. ಸರಸ್ವತಿ ಹೇಳಿದರು.
ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನಗರದ ಶಾರದಾ ವಿದ್ಯಾಲಯದಲ್ಲಿ ಜರಗುತ್ತಿರುವ ದ.ಕ. ಜಿಲ್ಲಾ ಮಟ್ಟದ 24ನೆ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ರವಿವಾರ ನಡೆದ ‘ದಾಸ ಸಾಹಿತ್ಯ- ವಚನ ಸಾಹಿತ್ಯ’ದ ಬಗ್ಗೆ ಅವರು ಉಪನ್ಯಾಸ ನೀಡಿದರು.
12ನೇ ಶತಮಾನದಲ್ಲಿ ಧಾರ್ಮಿಕ, ಸಾಮಾಜಿಕ ವಿಚಾರದಲ್ಲಿ ಸಾಕಷ್ಟು ಬದಲಾವಣೆಗಳು ನಡೆಯಲು ಆರಂಭವಾದಂತೆ ವಚನ ಸಾಹಿತ್ಯವೊಂದು ಚಳವಳಿಯ ರೂಪವನ್ನು ಪಡೆದುಕೊಂಡಿತು. ವಚನ ಸಾಹಿತ್ಯ ಹಾಗೂ ಹರಿದಾಸ ಸಾಹಿತ್ಯ ಎರಡು ಕೂಡ ವ್ಯಕ್ತಿ ಕಲ್ಯಾಣದ ಜತೆಗೆ ಸಮಾಜ ಕಲ್ಯಾಣವನ್ನೇ ಉದ್ದೇಶವಾಗಿಟ್ಟುಕೊಂಡು ಬೆಳೆದು ಬಂದಿದೆ ಎಂದರು.
ಈ ಸಂದರ್ಭ ಮಹಾಬಲ ಶೆಟ್ಟಿ, ವೀಣಾ ಭಟ್ ಉಪಸ್ಥಿತರಿದ್ದರು.
Next Story





