ಮಂಗಳೂರಲ್ಲಿ ‘ಸ್ವಚ್ಛಂದ’ ಪ್ರೇಮಿಗಳ ದಿನಾಚರಣೆ
ಸಂಘಪರಿವಾರದ ಮುಖಂಡರಿಗೆ ಖಡಕ್ ವಾರ್ನಿಂಗ್ ನೀಡಿದ್ದ ಪೊಲೀಸರು
ಮಂಗಳೂರು, ಫೆ.14: ಪ್ರೇಮಿಗಳ ದಿನವಾದ ರವಿವಾರ ದ.ಕ. ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ವರದಿಯಾಗಿಲ್ಲ. ನಗರದ ವಿವಿಧೆಡೆ ಪ್ರೇಮಿಗಳು ಸ್ವಚ್ಛಂದವಾಗಿ ವಿಹರಿಸಿದ್ದಾರೆ.
‘ವ್ಯಾಲಂಟೈನ್ಸ್ ಡೇ’ ಆಚರಿಸಬಾರದು, ಹೂವಿನಂಗಡಿ, ಗಿಫ್ಟ್ ಸೆಂಟರ್‌ಗಳು ವ್ಯಾಲಂಟೈನ್ ಡೇ ಗಿಫ್ಟ್ ಮಾರಾಟ ಮಾಡಬಾರದು ಎಂದು ಈ ಹೇಳಿಕೆ ನೀಡಿದ್ದ ಸಂಘಪರಿವಾರದ ಮುಖಂಡರಿಗೆ ಶನಿವಾರವೇ ಠಾಣೆಗೆ ಕರೆಸಿ ಪೊಲೀಸರು ಬಾಂಡ್ ಬರೆಸಿ ಎಚ್ಚರಿಕೆ ನೀಡಿದ್ದರು.
ಮಾತ್ರವಲ್ಲದೆ, ಅನೇಕರನ್ನು ಕರೆಸಿ ಖಡಕ್ ವಾರ್ನಿಂಗ್ ನೀಡಿದ್ದರು. ಈ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗಳಿಗೆ ದ.ಕ. ಸಾಕ್ಷಿಯಾಗಿಲ್ಲ. ನಗರದ ಅನೇಕ ಗಿಫ್ಟ್ ಸೆಂಟರ್‌ಗಳಲ್ಲಿ ಯುವಜನತೆ ಗಿಫ್ಟ್‌ಗಳನ್ನು ಖರೀದಿಸುತ್ತಿದ್ದುದು ಕಂಡುಬಂತು.
Next Story





