ಭಾಷಣದ ವೇಳೆ ಕುಸಿದು ಬಿದ್ದ ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ

ಅಹಮದಾಬಾದ್: ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ರವಿವಾರ ಸಂಜೆ ವಡೋದರಾದಲ್ಲಿ ಭಾಷಣ ಮಾಡುವಾಗ ವೇದಿಕೆಯಲ್ಲಿ ಕುಸಿದು ಬಿದ್ದ ಘಟನೆ ನಡೆದಿದೆ. ಸದ್ಯ ಅವರನ್ನು ಸರ್ಕಾರಿ ವಿಮಾನದ ಮೂಲಕ ಅಹಮದಾಬಾದ್‌ಗೆ ಕರೆದೊಯ್ಯಲಾಗುತ್ತಿದೆ ಎಂದು India today.in ವರದಿ ತಿಳಿಸಿದೆ.
ಸಿಎಂ ವಿಜಯ್ ರೂಪಾನಿ ಅವರ ಆರೋಗ್ಯ ಈಗ ಸ್ಥಿರವಾಗಿದೆ ಮತ್ತು ಕಡಿಮೆ ರಕ್ತದೊತ್ತಡ ಹಾಗೂ ಮಧುಮೇಹದ ಕಾರಣದಿಂದ ಅವರು ಮೂರ್ಛೆ ಹೋಗಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾಗಿ ವರದಿ ತಿಳಿಸಿದೆ
ವಿಜಯ್ ರೂಪಾನಿಯನ್ನು ಅಹಮದಾಬಾದ್‌ನ ಯುಎನ್ ಮೆಹ್ತಾ ಆಸ್ಪತ್ರೆಗೆ ಕರೆದೊಯ್ಯಲಾಗುವುದು, ಅಲ್ಲಿ ವೈದ್ಯರು ಮುನ್ನೆಚ್ಚರಿಕೆಯಾಗಿ ಸಂಪೂರ್ಣ ವೈದ್ಯಕೀಯ ತಪಾಸಣೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.
वडोदरा में चुनावी सभा में भाषण करते वक्त @CMOGuj @vijayrupanibjp मंच पे गिर पड़े बताया जा रहा अचानक रुपानी को चककर आ गया
— Nirnay Kapoor (@nirnaykapoor) February 14, 2021
विजय रुपाणी की तबियत अब ठीक बताई जा रही है उनका इलाज कर रहे डॉक्टर्स के अनुसार लगातार स्ट्रेस के कारण उनका BP लो हो गया था @indiatvnews pic.twitter.com/TkPKn0jXIY







