ಸಿಂಧ್ ಪ್ರಾಂತದ ಥಾರ್ ಮರುಭೂಮಿಯಲ್ಲಿ ಪಾಕ್ ಸಮರಾಭ್ಯಾಸ

photo: twitter(@DekhloPK)
ಇಸ್ಲಾಮಾಬಾದ್,ಫೆ.14: ಪಾಕಿಸ್ತಾನ ಸೇನೆಯು ಸಿಂಧ್ ಪ್ರಾಂತದ ಥಾರ್ ಮರುಭೂಮಿಯಲ್ಲಿ ಒಂದು ತಿಂಗಳ ಅವಧಿಯ ಸಮರಾಭ್ಯಾಸವನ್ನು ನಡೆಸುತ್ತಿದೆ. ‘ಜಿದಾರುಲ್ ಹದೀದ್’ ಎಂಬ ಸಂಕೇತನಾಮದ ಈ ಸಮರಾಭ್ಯಾಸವು ಜನವರಿ 28ರಂದು ಆರಂಭಗೊಂಡಿದ್ದು, ಪೆಬ್ರವರಿ 28ರಂದು ಮುಕ್ತಾಯವಾಗಲಿದೆ ಎಂದು ಪಾಕ್ ಸೇನೆ ಶನಿವಾರ ಹೇಳಿಕೆಯೊಂದರಲ್ಲಿ ತಿಳಿಸಿದೆ.
ಸಮರಾಭ್ಯಾಸದ ಭಾಗವಾಗಿ ಪಾಕ್ ಸೇನಾಪಡೆಯ ಕರಾಚಿ ಕಾರ್ಪ್ಸ್ ಪಡೆಗಳು ವ್ಯೆಹಾತ್ಮಕ ಕವಾಯತುಗಳ ತಾಲೀಮು ನಡೆಸುತ್ತಿವೆ. ಸಿಂಧ್ನ ಚ್ಚೋರ್ನಿಂದ 74 ಕಿ.ಮೀ. ದೂರದಲ್ಲಿ ಮರುಭೂಮಿಯ ಪ್ರತಿಕೂಲ ವಾತಾರಣದಲ್ಲ್ಲಿ ಸಮರಾಭ್ಯಾಸಗಳನ್ನು ನಡೆಸಲಾಗುತ್ತಿದೆ ಎಂದು ಪಾಕ್ಸೇನೆ ಹೇಳಿದೆ.
ಭಾರತ ಹಾಗೂ ಪಾಕಿಸ್ತಾನಗಳ ನಡುವಿನ ಗಡಿಯುದ್ದಕ್ಕೂ ಹರಡಿಕೊಂಡಿರುವ ಥಾರ್ ಮರುಭೂಮಿಯು ಉಭಯದೇಶಗಳಿಗೆ ಒಂದು ಪ್ರಾಕೃತಿಕವಾದ ಸೀಮಾರೇಖೆಯಾಗಿದೆ. ಶುಕ್ರವಾರದಂದು ಪಾಕಿಸ್ತಾನವು ಆರಬ್ಬಿ ಸಮುದ್ರದಲ್ಲಿ ಒಂದು ವಾರ ಅವಧಿಯ ನೌಕಾಪಡೆ ಸಮರಾಭ್ಯಾಸ ‘ಅಮಾನ್ -2021’ಆರಂಭಿಸಿದ್ದು, ಅಮೆರಿಕ, ರಶ್ಯ, ಚೀನಾ ಸೇರಿದಂತೆ 45 ದೇಶಗಳು ಪಾಲ್ಗೊಂಡಿವೆ.





