ತಲಪಾಡಿ: ಫೆ.21ರಂದು ದಾರುಲ್ ಉಲೂಂ ವಿಮೆನ್ಸ್ ಕಾಲೇಜಿನ ನವೀಕೃತ ಕಟ್ಟಡ ಉದ್ಘಾಟನೆ
ಮಂಗಳೂರು, ಫೆ.14: ತಲಪಾಡಿಯ ದಾರುಲ್ ಉಲೂಂ ವಿಮೆನ್ಸ್ ಅರಬಿಕ್ ಕಾಲೇಜಿನ ನವೀಕೃತ ಕಟ್ಟಡ ಉದ್ಘಾಟನೆ ಮತ್ತು ‘ಕುರ್‌ಆನ್ ಕಲಿಯುವುದು ಕಡ್ಡಾಯ’ ಎಂಬ ಧ್ಯೇಯ ವಾಕ್ಯದೊಂದಿಗೆ ಅಭಿಯಾನಕ್ಕೆ ಚಾಲನೆ ಕಾರ್ಯಕ್ರಮವು ಫೆ.21ರಂದು ನಡೆಯಲಿದೆ.
ಅಂದು ಸಂಜೆ 5ಕ್ಕೆ ಅಲ್ ಜುಬೈಲ್‌ನ ಎಕ್ಸ್‌ಪರ್ಟೈಸ್ ಕಂಪೆನಿಯ ನಿರ್ದೇಶಕ ಕೆ.ಎಸ್.ಶೇಕ್ ಕರ್ನೀರೆ ಕಾಲೇಜಿನ ನವೀಕೃತ ಕಟ್ಟಡವನ್ನು ಉದ್ಘಾಟಿಸುವರು. ಕಾಲೇಜಿನ ಅಧ್ಯಕ್ಷ ಮೂಸ ತಲಪಾಡಿ ಸಮಾರಂಭದ ಅಧ್ಯಕ್ಷತೆ ವಹಿಸುವರು.
ಅಂದು ಅಪರಾಹ್ನ 2:30ರಿಂದ 4ರವರೆಗೆ ಮಹಿಳೆ ಸಮಾವೇಶ ಜರುಗಲಿದೆ. ಸಂಜೆ 5ರಿಂದ ರಾತ್ರಿ 8:30ರವರೆಗೆ ಧಾರ್ಮಿಕ ಪ್ರವಚನ ಕಾರ್ಯಕ್ರಮ ನಡೆಯಲಿದೆ. ಮುಖ್ಯ ಪ್ರವಚನಕಾರರಾಗಿ ಮೌಲಾನಾ ಉನೈಸ್ ಪಾಪಿನಶ್ಶೇರಿ ಆಗಮಿಸುವರು ಎಂದು ಪ್ರಕಟನೆ ತಿಳಿಸಿದೆ
Next Story





