ಮದ್ದಡ್ಕ ನೂರುಲ್ ಹುದಾ ಜುಮಾ ಮಸೀದಿಯ ನೂತನ ಅಧ್ಯಕ್ಷರಾಗಿ ಎಂ.ಎ. ಬದ್ರುದ್ದೀನ್ ಮಾಸ್ಟರ್ ಆಯ್ಕೆ

ಬೆಳ್ತಂಗಡಿ: ಮದ್ದಡ್ಕ ನೂರುಲ್ ಹುದಾ ಜುಮಾ ಮಸೀದಿಯ ವಾರ್ಷಿಕ ಮಹಾಸಭೆಯು ನೂರುಲ್ ಹುದಾ ಮಸೀದಿಯ ಸಭಾಂಗಣದಲ್ಲಿ ಸಯ್ಯದ್ ಅಬ್ದುರ್ರಹ್ಮಾನ್ ಸಾದಾತ್ ತಂಙಳ್ ಅವರ ಅದ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ನೂತನ ಅಧ್ಯಕ್ಷರನ್ನು ಮತ್ತು ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ನೂತನ ಸಾಲಿನ ಅಧ್ಯಕ್ಷರಾಗಿ ಎಂ.ಎ. ಬದ್ರುದ್ದೀನ್ ಮಾಸ್ಟರ್, ಉಪಾಧ್ಯಕ್ಷರಾಗಿ ಎಚ್.ಎಂ. ಹಸನಬ್ಬ ಚಿಲಿಂಬಿ, ಸಹ ಅಧ್ಯಕ್ಷರಾಗಿ ಸ್ವಾಲಿ ಅಲಂದಿಲ, ಪ್ರದಾನ ಕಾರ್ಯದರ್ಶಿಯಾಗಿ ಎಂ ಸಿರಾಜ್ ಚಿಲಿಂಬಿ, ಜೊತೆ ಕಾರ್ಯದರ್ಶಿಯಾಗಿ ಸಾದಿಕ್ ಮದ್ದಡ್ಕ ಮತ್ತು ರಿಯಾಝ್ ಮುಂಡ್ಕೂರ್, ಕೋಶಾಧಿಕಾರಿಯಾಗಿ ರಿಯಾಝ್ ಸಬರಬೈಲ್ ಲೆಕ್ಕಪರಿಶೋಧಕರಾಗಿ ಅಹ್ಮದ್ ಇಬ್ರಾಹಿಂ ನೇರಳಕಟ್ಟೆ ಮತ್ತು ಒಟ್ಟು 46 ಕಾರ್ಯಕಾರಿ ಸಮಿತಿ ಸದಸ್ಯರಾಗಿ ನೇಮಕಗೊಳ್ಳಲಾಯಿತು.
Next Story





