Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಓ ಮೆಣಸೇ
  4. ಓ ಮೆಣಸೇ...

ಓ ಮೆಣಸೇ...

ಪಿ.ಎ.ರೈಪಿ.ಎ.ರೈ15 Feb 2021 12:10 AM IST
share
ಓ ಮೆಣಸೇ...

ಭಾರತದ ಹೆಸರಿಗೆ ಮಸಿ ಬಳಿಯುವುದಕ್ಕಾಗಿ ಹೊಂಚು ಹಾಕುತ್ತಿರುವ ಜಾಗತಿಕ ಸಂಚುಕೋರರು ನಮ್ಮ ಚಹಾವನ್ನ್ನೂ ಬಿಟ್ಟಿಲ್ಲ -ನರೇಂದ್ರ ಮೋದಿ, ಪ್ರಧಾನಿ

ಚಹಾ ಮಾರುವವರ ಹೆಸರಿಗೆ ಮಸಿ ಬಳಿದವರು ಯಾರು ಎನ್ನುವುದು ದೇಶಕ್ಕೆ ಚೆನ್ನಾಗಿ ಗೊತ್ತಿದೆ.


ಮಹಾರಾಷ್ಟ್ರ ಸರಕಾರವು ಮೂರು ಚಕ್ರಗಳ ಆಟೊರಿಕ್ಷಾವಾಗಿದ್ದು, ಮೂರೂ ಚಕ್ರಗಳು ಬೇರೆ ಬೇರೆ ದಿಕ್ಕಿನತ್ತ ಚಲಿಸಿವೆ- ಅಮಿತ್ ಶಾ, ಕೇಂದ್ರ ಸಚಿವ
ನೀವು ಬಿಡುತ್ತಿರುವ ಚಕ್ರವಿಲ್ಲದ ರೈಲಿಗಿಂತ ವಾಸಿ.


ದ.ಕ. ಜಿಲ್ಲೆಯಲ್ಲಿ ಕೊರೋನ ಕಣ್ಮರೆಯಾಗುವ ಹಂತದಲ್ಲಿದೆ - ಕೋಟ ಶ್ರೀನಿವಾಸ ಪೂಜಾರಿ, ಸಚಿವ
ಬಹುಶಃ ಆಸ್ಪತ್ರೆಗಳ ಹೊಟ್ಟೆ ತುಂಬಿದ ಲಕ್ಷಣ ಸಿಕ್ಕಿರಬೇಕು.


ಟೀಕೆಗಳನ್ನು ಸವಾಲಾಗಿ ಸ್ವೀಕರಿಸಿ ಕೆಲಸ ಮಾಡುತ್ತೇನೆ - ಎಸ್.ಅಂಗಾರ, ಸಚಿವ
ಕನಿಷ್ಠ ಇತರರು ಟೀಕೆ ಮಾಡುವುದಕ್ಕಾದರೂ ಸ್ವಲ್ಪ ಕೆಲಸ ಮಾಡಿ.


ಸಭಾಪತಿ ಸ್ಥಾನದ ವಿಚಾರವಾಗಿ ಮಾತ್ರ ಬಿಜೆಪಿ ಜೊತೆ ಮೈತ್ರಿ- ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ
ಆ ಒಂದು ರಾತ್ರಿ ಬೆಲೆಯೆಷ್ಟು ಎಂದು ಬಹಿರಂಗಪಡಿಸಬಾರದೆ?


ಕೇಂದ್ರ ಸರಕಾರವು ಸದಾ ಭವಿಷ್ಯದ ಭಾರತದ ಬಗ್ಗೆ ಚಿಂತಿಸುತ್ತದೆ - ಪಿಯೂಷ್ ಗೋಯಲ್, ಕೇಂದ್ರ ಸಚಿವ
ಹೌದು, ಭಾರತದ ಭವಿಷ್ಯದ ಬಗ್ಗೆ ಎಲ್ಲರಿಗೂ ಚಿಂತೆ ಹತ್ತಿದೆ.


ಹಳೆಯ ವಾಹನಗಳನ್ನು ಗುಜರಿಗೆ ಹಾಕಿ ಹೊಸ ವಾಹನಗಳನ್ನು ಖರೀದಿಸುವವರಿಗೆ ಹಲವು ಸೌಲಭ್ಯಗಳನ್ನು ನೀಡಲಾಗುತ್ತದೆ - ನಿತಿನ್ ಗಡ್ಕರಿ, ಕೇಂದ್ರ ಸಚಿವ
ಶಾಸಕರ ಖರೀದಿಯಲ್ಲೂ ಈ ಸೌಲಭ್ಯ ವಿಸ್ತರಿಸಲಾಗುತ್ತದೆಯೇ?


ಕರುನಾಡಿನ ಬಹುದಿನದ ಕನಸು ಗೋ ಹತ್ಯೆ ನಿಷೇಧ ಕಾಯ್ದೆ ಅಂಗೀಕಾರ ಆಗಿರುವುದು ಸಂತಸ ತಂದಿದೆ - ಪ್ರಭು ಚವ್ಹಾಣ್, ಸಚಿವ
ರೈತರ ಪಾಲಿಗೆ ಕರಾಳ ನಾಡು.


ಕರ್ನಾಟಕದಲ್ಲಿ ಯಡಿಯೂರಪ್ಪರ ನಂತರದ ನಾಯಕರನ್ನು ಕಾಲವೇ ನಿರ್ಧರಿಸುತ್ತದೆ - ಸಿ.ಟಿ.ರವಿ, ಮಾಜಿ ಸಚಿವ
ಕಾಲ ನಿರ್ಧರಿಸುವುದಿಲ್ಲ, ಆರೆಸ್ಸೆಸ್ ನಿರ್ಧರಿಸುತ್ತದೆ.


ಹೆತ್ತ ತಾಯಿ ಕೆಲವು ವರ್ಷ ಹಾಲು ಕುಡಿಸಿದರೆ ಗೋವು ಅನುಗಾಲವೂ ಹಾಲು ಕೊಟ್ಟು ನಮ್ಮನ್ನು ಪೋಷಿಸುತ್ತದೆ -ಆರ್.ಅಶೋಕ್, ಸಚಿವ
ರೈತ ಸಾಕಿ ಬೆಳೆಸಿದರೆ ಮಾತ್ರ ಗೋವು ಹಾಲುಕೊಡುವುದು. ಅವನನ್ನು ಕೊಂದು ಗೋವನ್ನು ಉಳಿಸಲು ಹೊರಟವರು ಸರ್ವನಾಶವಾಗುತ್ತಾರೆ.


ನೂತನ ಕೃಷಿ ಕಾಯ್ದೆಗಳ ವಿರುದ್ಧ ದಿಲ್ಲಿಯಲ್ಲಿ ಪ್ರತಿಭಟನೆ ನಡೆಸುತ್ತಿರುವವರು ನಕಲಿ ರೈತರು - ಕೆ.ಎಸ್.ಈಶ್ವರಪ್ಪ, ಸಚಿವ
ನಾಲಗೆ, ಕೈಗಳನ್ನು ಕತ್ತರಿಸುವುದೇ ಕೃಷಿಯೆಂದು ತಿಳಿದ ರೈತನ ಹೇಳಿಕೆ.


ಕಳೆದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರದಲ್ಲಿ ನಾನು ಮತ್ತು ಬಸವರಾಜ ಹೊರಟ್ಟಿ ಮಂತ್ರಿಯಾಗಿರುತ್ತಿದ್ದರೆ ಸರಕಾರ ಪತನವಾಗಿರುತ್ತಿರಲಿಲ್ಲ - ಎಚ್.ವಿಶ್ವನಾಥ್, ವಿ.ಪ.ಸದಸ್ಯ
ಪತನವಾದದ್ದೇ ಒಳ್ಳೆಯದಾಯಿತು ಬಿಡಿ.


ಆನ್‌ಲೈನ್ ಮೂಲಕ ಮದ್ಯ ಮಾರಾಟಕ್ಕೆ ಅನುಮತಿ ನೀಡುವ ಪ್ರಸ್ತಾವ ಸರಕಾರದ ಮುಂದಿಲ್ಲ - ಕೆ.ಗೋಪಾಲಯ್ಯ, ಸಚಿವ
ಆನ್‌ಲೈನ್ ಮೂಲಕ ದೇಶವನ್ನು ಮಾರಾಟ ಮಾಡುವುದೊಂದೇ ಉಳಿದಿರುವುದು.


ರಾಜ್ಯದಲ್ಲಿ ಹಿಂದುಳಿದವರು, ದಲಿತರು, ಅಲ್ಪಸಂಖ್ಯಾತರಿಗೆ ಅನ್ಯಾಯವಾದರೆ ರಸ್ತೆಗಿಳಿದು ಹೋರಾಟ ನಡೆಸಲಾಗುವುದು- ಸಿದ್ದರಾಮಯ್ಯ,ಮಾಜಿ ಮುಖ್ಯಮಂತ್ರಿ
ಇನ್ನೂ ಯಾವ ರೀತಿಯ ಅನ್ಯಾಯವಾಗಬೇಕು ಎಂದು ಕಾಯುತ್ತಿದ್ದೀರಿ?


ನಾನು ಸೂಪರ್ ಸಿಎಂ ಅಲ್ಲ, ನಮ್ಮ ತಂದೆಯ ರಕ್ಷಕ -ಬಿ.ವೈ. ವಿಜಯೇಂದ್ರ, ಬಿಜೆಪಿ ಉಪಾಧ್ಯಕ್ಷ
ಜೊತೆಗೆ ಖಜಾನೆಯ ಭಕ್ಷಕ.


ಓರ್ವ ಭಾರತೀಯ ಮುಸ್ಲಿಂ ಆಗಿರುವುದಕ್ಕೆ ನನಗೆ ಹೆಮ್ಮೆ ಇದೆ - ಗುಲಾಂ ನಬಿ ಆಝಾದ್, ಕಾಂಗ್ರೆಸ್ ಮುಖಂಡ
ಆದರೆ ಭಾರತಕ್ಕೆ ಆ ಬಗ್ಗೆ ಯಾವ ಹೆಮ್ಮೆಯೂ ಇದ್ದಂತಿಲ್ಲ.


ಮಾಡುವ ಕೆಲಸದ ಉದ್ದೇಶ ಒಳ್ಳೆಯದಿದ್ದರೆ ಫಲಿತಾಂಶ ಚೆನ್ನಾಗಿರುತ್ತದೆ - ನರೇಂದ್ರ ಮೋದಿ, ಪ್ರಧಾನಿ
ಫಲಿತಾಂಶ ಚೆನ್ನಾಗಿ ಬರದೇ ಇರುವುದರ ಕಾರಣ ಗೊತ್ತಾಯಿತು ಬಿಡಿ.


ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ವಿವಾದಿತ ಕೃಷಿ ತಿದ್ದುಪಡಿ ಕಾಯ್ದೆಗಳನ್ನು ರದ್ದು ಮಾಡಲಿದೆ - ಪ್ರಿಯಾಂಕಾ ಗಾಂಧಿ, ಕಾಂಗ್ರೆಸ್ ನಾಯಕಿ
ಅಧಿಕಾರಕ್ಕೆ ಬರುವ ಸಾಧ್ಯತೆಗಳಿಲ್ಲ ಎನ್ನುವ ಧೈರ್ಯದಿಂದ ಮಾತನಾಡುತ್ತಿರಬೇಕು.


ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ವಂತ ಪಕ್ಷ ಕಟ್ಟಿ ತಾನೂ ಸೇರಿದಂತೆ 5 ಸ್ಥಾನಗಳನ್ನು ಗೆದ್ದು ತೋರಿಸಲಿ - ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ
ನೀವು ಸ್ವಂತ ಬಲದಿಂದ ಒಮ್ಮೆ ಮುಖ್ಯಮಂತ್ರಿಯಾಗಿ ತೋರಿಸಿ.


ಪ್ರಧಾನಿ ನರೇಂದ್ರ ಮೋದಿ ಎಲ್ಲರ ಪ್ರೀತಿ ಪಾತ್ರರಾದ, ಜನಪ್ರಿಯ, ದೂರದೃಷ್ಟಿಯುಳ್ಳ, ಗಟ್ಟಿ ನಿರ್ಧಾರ ತೆಗೆದುಕೊಳ್ಳಬಲ್ಲ ಅಪ್ರತಿಮ ನಾಯಕ - ಎಂ.ಆರ್.ಶಾ. ಸು.ಕೋ. ನ್ಯಾಯಾಧೀಶ
ಆದರೆ ನ್ಯಾಯಾಲಯ ಮಾತ್ರ ಎಲ್ಲ ಪ್ರೀತಿಯನ್ನು, ಜನಪ್ರಿಯತೆಯನ್ನು, ದೂರದೃಷ್ಟಿಯನ್ನು, ಗಟ್ಟಿ ನಿರ್ಧಾರಗಳನ್ನು ಕಳೆದುಕೊಂಡು ದುರ್ಬಲವಾಗಿರುವುದು ವಿಷಾದನೀಯ.


ನಾವು ಕಟ್ಟಿದ ಸಾಮ್ರಾಜ್ಯವನ್ನು ಉಳಿಸಲು ಮುಂದೆ ನಮ್ಮ ಮಕ್ಕಳು ರಾಜಕೀಯಕ್ಕೆ ಬಂದೇ ಬರುತ್ತಾರೆ - ಸತೀಶ್ ಜಾರಕಿಹೊಳಿ, ಕೆಪಿಸಿಸಿ ಕಾರ್ಯಾಧ್ಯಕ್ಷ
ವಿಜಯನಗರ ಸಾಮ್ರಾಜ್ಯವನ್ನು ಕಟ್ಟಿರುವುದು ನೀವೇ ಇರಬೇಕು.


ರಾಜ್ಯದಲ್ಲಿ ನಡೆಯುತ್ತಿರುವ ಉಪ ಚುನಾವಣೆಗೆ ಸ್ಪರ್ಧಿಸಲು ನಮ್ಮ ಬಳಿ ಹಣವಿಲ್ಲ - ಎಚ್.ಡಿ.ದೇವೇಗೌಡ, ಮಾಜಿ ಪ್ರಧಾನಿ
ಹಣಕ್ಕಾಗಿ ಮತ್ತೆ ಬಿಜೆಪಿಯ ಜೊತೆಗೆ ರಾತ್ರಿ ಕಳೆಯುವ ಉದ್ದೇಶವಿದೆಯೇ?

share
ಪಿ.ಎ.ರೈ
ಪಿ.ಎ.ರೈ
Next Story
X