ಚೆನ್ನೈ ಟೆಸ್ಟ್: ಎರಡನೇ ಇನಿಂಗ್ಸ್ ನಲ್ಲಿ ಭಾರತ ಆರಂಭಿಕ ಕುಸಿತ

ಚೆನ್ನೈ: ಇಂಗ್ಲೆಂಡ್ ತಂಡವನ್ನು ಮೊದಲ ಇನಿಂಗ್ಸ್ ನಲ್ಲಿ ಕೇವಲ 134 ರನ್ ಗೆ ನಿಯಂತ್ರಿಸಿ 195 ರನ್ ಮುನ್ನಡೆ ಪಡೆದಿದ್ದ ಭಾರತ ಎರಡನೇ ಇನಿಂಗ್ಸ್ ನಲ್ಲಿ ಆರಂಭಿಕ ಆಘಾತಕ್ಕೆ ಒಳಗಾಗಿದೆ.
ಮೂರನೇ ದಿನವಾದ ಸೋಮವಾರ ಭಾರತವು 1 ವಿಕೆಟ್ ನಷ್ಟಕ್ಕೆ 54 ರನ್‍ನಿಂದ ಎರಡನೇ ಇನಿಂಗ್ಸ್ ಮುಂದುವರಿಸಿತು.
ಭಾರತವು 36 ಓವರ್ ಗಳಲ್ಲಿ 106 ರನ್ ಗೆ 6 ವಿಕೆಟ್ ಗಳನ್ನು ಕಳೆದುಕೊಂಡಿದೆ. 25 ರನ್ ನಿಂದ ಬ್ಯಾಟಿಂಗ್ ಮುಂದುವರಿಸಿದ ರೋಹಿತ್ ಶರ್ಮಾ ನಿನ್ನೆಯ ಮೊತ್ತಕ್ಕೆ ಕೇವಲ 1 ರನ್ ಸೇರಿಸಿ 26 ರನ್ ಗೆ ಔಟಾದರು. ಚೇತೇಶ್ವರ ಪೂಜಾರ ನಿನ್ನೆಯ ಸ್ಕೋರ್ ಗೆ ಒಂದೂ ರನ್ ಸೇರಿಸದೇ 7 ರನ್ ಗೆ ಔಟಾದರು.
ರಿಷಭ್ ಪಂತ್(8) ಹಾಗೂ ಅಜಿಂಕ್ಯ ರಹಾನೆ(10) ಅಲ್ಪ ಮೊತ್ತಕ್ಕೆ ಔಟಾದರು. ನಾಯಕ ವಿರಾಟ್ ಕೊಹ್ಲಿ(ಔಟಾಗದೆ 22) ಕ್ರೀಸ್ ಕಾಯ್ದುಕೊಂಡಿದ್ದಾರೆ.
ಸ್ಪಿನ್ನರ್ ಜಾಕ್ ಲೀಚ್ 48 ರನ್ ಗೆ 3 ವಿಕೆಟ್ ಗಳನ್ನು ಕಬಳಿಸಿದರು. 38 ರನ್ ಗೆ 2 ವಿಕೆಟ್ ಪಡೆದ ಮೊಯಿನ್ ಅಲಿ ಅವರು ಲೀಚ್ ಗೆ ಸಾಥ್ ನೀಡಿದರು.
Next Story





