ರೈತರನ್ನು ಬೆಂಬಲಿಸುವುದು ಅಪರಾಧವಲ್ಲ: ದಿಶಾ ರವಿ ಬಂಧನದ ವಿರುದ್ಧ ಕೇಜ್ರಿವಾಲ್ ಆಕ್ರೋಶ

"ದೆಹಲಿ ಪೊಲೀಸರ ಈ ಕ್ರಮವು ಪ್ರಜಾಪ್ರಭುತ್ವದ ಮೇಲಿನ ದಾಳಿ" ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು 21 ವರ್ಷದ ಪರಿಸರ ಕಾರ್ಯಕರ್ತೆ ದಿಶಾ ರವಿ ಬಂಧನಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. "ಟೂಲ್ ಕಿಟ್" ಪ್ರಕರಣದಲ್ಲಿ ತನ್ನ ಪಾತ್ರಕ್ಕಾಗಿ ಬೆಂಗಳೂರು ನಿವಾಸಿಯಾಗಿರುವ ದಿಶಾ ರವಿಯನ್ನು ಶನಿವಾರ ವಶಕ್ಕೆ ತೆಗೆದುಕೊಳ್ಳಲಾಗಿತ್ತು.
ಪ್ರತಿಭಟನಾ ನಿರತ ಭಾರತೀಯ ರೈತರನ್ನು ಬೆಂಬಲಿಸಿ ಆನ್‌ಲೈನ್ ಡಾಕ್ಯುಮೆಂಟ್ ರಚಿಸಿದ ಮತ್ತು
ಪರಿಸರವಾದಿ ಗ್ರೆಟಾ ಥನ್‌ಬರ್ಗ್ ಅವರ ಪಾಲ್ಗೊಳ್ಳುವಿಕೆಗೆ ಸಹಕರಿಸಿದ್ದಾಗಿ ಇವರನ್ನು ದೇಶದ್ರೋಹ ಆರೋಪದಡಿ ಬಂಧಿಸಲಾಗಿದೆ. ಈ ಪ್ರಕರಣದಲ್ಲಿ ಬಂಧನಕ್ಕೊಳಗಾದ ಮೊತ್ತಮೊದಲ ವ್ಯಕ್ತಿ ಇವರಾಗಿದ್ದಾರೆ.
"ಟೂಲ್ ಕಿಟ್" ಖಲಿಸ್ತಾನಿ ಪಿತೂರಿ ಎಂದು ಈ ಹಿಂದೆ ಹೇಳಿದ್ದ ಪೊಲೀಸರು, ದಿಶಾರವಿ ಅವರು ದಾಖಲೆ ರೂಪಿಸುವಿಕೆ ಮತ್ತು ಪ್ರಸಾರದಲ್ಲಿ ಪ್ರಮುಖ ಪ್ರಮುಖ ಪಾತ್ರ ವಹಿಸಿದ್ದರು. ಎಂದು ಆರೋಪಿಸಿದ್ದಾರೆ ಮತ್ತು ಅವರು ಸಿಖ್ ಪ್ರತ್ಯೇಕತಾವಾದಿ ಗುಂಪನ್ನು ಪುನರುಜ್ಜೀವನಗೊಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
"ನಾನು ಟೂಲ್ಕಿಟ್ ತಯಾರಿಸಲಿಲ್ಲ, ನಾವು ರೈತರನ್ನು ಬೆಂಬಲಿಸಲು ಬಯಸಿದ್ದೆವು. ಫೆಬ್ರವರಿ 3 ರಂದು ನಾನು ಟೂಲ್ ಕಿಟ್ ನ ಎರಡು ಸಾಲುಗಳನ್ನು ಸಂಪಾದಿಸಿದ್ದೇನಷ್ಟೇ" ಎಂದು ದಿಶಾ ರವಿ ದೆಹಲಿ ನ್ಯಾಯಾಲಯಕ್ಕೆ ತಿಳಿಸಿದ್ದರು.
ಕೇಜ್ರಿವಾಲ್ ಅವರ ಸರ್ಕಾರ ಮತ್ತು ಆಮ್ ಅದ್ಮಿ ಪಕ್ಷ, ಕಾಂಗ್ರೆಸ್, ಅಕಾಲಿ ದಳ, ಎಸ್ಪಿ ಮತ್ತು ಬಿಎಸ್ಪಿಯಂತಹ ಅನೇಕ ರಾಜಕೀಯ ಪಕ್ಷಗಳು ಹಾಗೂ ಸಂಘಟನೆಗಳು ದಿಶಾ ರವಿ ಬಂಧನವನ್ನು ಖಂಡಿಸಿವೆ.
ಕಾಂಗ್ರೆಸ್ ಕೂಡ ಬಂಧನವನ್ನು "ದೌರ್ಜನ್ಯ" ಎಂದು ಕರೆದಿದೆ.







