ಪೊಲೀಸ್ ಠಾಣೆ ಮುಂಭಾಗದ ಚರಂಡಿಯಲ್ಲಿ ಮಹಿಳೆಯ ಶವ ಪತ್ತೆ !

ಬೆಂಗಳೂರು, ಫೆ.15: ನಗರದ ಕಾಮಾಕ್ಷಿಪಾಳ್ಯ ಸಂಚಾರ ಪೊಲೀಸ್ ಠಾಣೆಯ ಮುಂಭಾಗದ ಎಚ್.ಬಿ.ಕಲ್ಯಾಣ ಮಂಟಪದ ಬಳಿಯ ಚರಂಡಿ ದುರಸ್ತಿ ವೇಳೆ ಮೃತದೇಹವೊಂದು ಪತ್ತೆಯಾಗಿದೆ.
ಇತ್ತೀಚಿಗೆ ಚರಂಡಿಯಲ್ಲಿ ಸರಾಗವಾಗಿ ನೀರು ಹೋಗುತ್ತಿರಲಿಲ್ಲ. ಇದರಿಂದ ಸುತ್ತಮುತ್ತಲಿನ ಪ್ರದೇಶ ರ್ದುವಾಸನೆಯಿಂದ ಕೂಡಿತ್ತು. ಈ ಸಂಬಂಧ ಬಿಬಿಎಂಪಿ ಸಿಬ್ಬಂದಿ ಚರಂಡಿಯಲ್ಲಿ ಹೂಳು ತೆಗೆಯಲು ಮೋರಿಯ ಛಾವಣಿ ತೆಗೆಯಲು ಮುಂದಾಗುತ್ತಿದ್ದಂತೆ ಮೃತದೇಹ ಕಂಡು ಆತಂಕಕ್ಕೆ ಒಳಗಾಗಿದ್ದಾರೆ.
ಘಟನೆ ಸಂಬಂಧ ವಿಜಯನಗರ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಎರಡು ವರ್ಷಕ್ಕೂ ಹಿಂದೆಯೇ ಮಹಿಳೆ ಶವವನ್ನು ಚರಂಡಿಯಲ್ಲಿ ಹಾಕಿರಬಹುದು ಎಂದು ಮೇಲ್ನೋಟಕ್ಕೇ ಗೊತ್ತಾಗಿದೆ.
ಸದ್ಯ ಶವವನ್ನು ಸ್ಥಳದಿಂದ ತೆರವುಗೊಳಿಸಲಾಗಿದೆ. ಮೃತಪಟ್ಟಿರುವವರ ಹೆಸರು, ವಿಳಾಸ ಗೊತ್ತಾಗಿಲ್ಲ. ಈ ಹಿಂದೆ ದಾಖಲಾಗಿದ್ದ ನಾಪತ್ತೆ ಪ್ರಕರಣಗಳ ಮಾಹಿತಿ ಕಲೆ ಹಾಕಿರುವ ಪೊಲೀಸರು ಅನಾಥ ಶವದ ಮಾಹಿತಿಗಾಗಿ ತನಿಖೆ ಕೈಗೊಂಡಿದ್ದಾರೆ.
Next Story





