ಸೈಟ್‍ಗಳಿಗೆ ನಕಲಿ ದಾಖಲೆ ಸೃಷ್ಟಿಸಿದ ಆರೋಪ: ನಾಲ್ವರು ಬಿಡಿಎ ಇಂಜಿನಿಯರ್ ಗಳು ಪೊಲೀಸ್ ಕಸ್ಟಡಿಗೆ

ಬೆಂಗಳೂರು, ಫೆ.15: ಮೂವತ್ತಕ್ಕೂ ಹೆಚ್ಚು ಸೈಟ್‍ಗಳಿಗೆ ನಕಲಿ ದಾಖಲೆ ಸೃಷ್ಟಿಸಿದ ಆರೋಪ ಪ್ರಕರಣ ಸಂಬಂಧ ನಾಲ್ವರು ಬಿಡಿಎ ಇಂಜಿನಿಯರ್‍ಗಳನ್ನು 4ನೆ ಎಸಿಎಂಎಂ ಕೋರ್ಟ್ ಪೊಲೀಸ್ ಕಸ್ಟಡಿಗೆ ನೀಡಿ ಆದೇಶಿಸಿದೆ.
ಬಿಡಿಎ ಉತ್ತರ ವಿಭಾಗದ ಇಂಜಿನಿಯರ್ ಗಳಾದ ಶ್ರೀರಾಮ್, ಎಂ.ಎಸ್.ಶಂಕರಮೂರ್ತಿ, ಕೆ.ಎನ್.ರವಿಕುಮಾರ್ ಹಾಗೂ ಶಬೀರ್ ನನ್ನು ಹೆಚ್ಚಿನ ವಿಚಾರಣೆಗಾಗಿ ಫೆ.22ರವರೆಗೆ ಪೊಲೀಸ್ ಕಸ್ಟಡಿಗೆ ನೀಡಿ ಕೋರ್ಟ್ ಆದೇಶ ಹೊರಡಿಸಿದೆ.
30ಕ್ಕೂ ಹೆಚ್ಚು ಸೈಟ್‍ಗಳಿಗೆ ನಕಲಿ ದಾಖಲೆ ಸೃಷ್ಟಿಸಿರುವ ಆರೋಪದಡಿ ಐವರು ಬಿಡಿಎ ಇಂಜಿನಿಯರ್ ಗಳನ್ನು ಪೊಲೀಸರು ಬಂಧಿಸಿದ್ದರು. ಪ್ರಾಧಿಕಾರದ ಆಯುಕ್ತರ ಸೂಚನೆ ಮೇರೆಗೆ ಕೇಸ್ ದಾಖಲಿಸಿ ಶೇಷಾದ್ರಿಪುರಂ ಠಾಣೆಯ ಪೊಲೀಸರು ಐವರನ್ನು ಬಂಧಿಸಿದ್ದರು.
Next Story





