ವಿಶ್ವ ವಾಣಿಜ್ಯ ಸಂಘಟನೆಯ ಮುಖ್ಯಸ್ಥರಾಗಿ ನೈಜೀರಿಯದ ನಗೋಝಿ ಒಕೊಂಜೊ-ಇವೆಲಾ ನೇಮಕ

ಜಿನೇವ: ನೈಜೀರಿಯದ ಆರ್ಥಿಕ ತಜ್ಞೆ ನಗೋಝಿ ಒಕೊಂಜೊ-ಇವೆಲಾ ಅವರು ವಿಶ್ವ ವಾಣಿಜ್ಯ ಸಂಘಟನೆಯ (ಡಬ್ಲ್ಯು ಟಿ ಒ) ಮುಖ್ಯಸ್ಥರಾಗಿ ಸೋಮವಾರ ನೇಮಕಗೊಂಡಿದ್ದಾರೆ. ಇಲ್ಲಿ ನಡೆದ ವಿಶೇಷ ಸಾಮಾನ್ಯ ಸಭೆಯಲ್ಲಿ ವಿಶ್ವ ವಾಣಿಜ್ಯ ಸಂಘಟನೆಯ ಮುಖ್ಯಸ್ಥರಾಗಿ ನೇಮಕಗೊಂಡ ಮೊದಲ ಮಹಿಳೆ ಹಾಗೂ ಆಫ್ರಿಕಾದ ಮೊದಲ ಪ್ರಜೆ ಎಂಬ ಹಿರಿಮೆಗೆ ನಗೋಝಿ ಪಾತ್ರರಾಗಿದ್ದಾರೆ.
“ಮುಂದಿನ ಪ್ರಧಾನ ನಿರ್ದೇಶಕರನ್ನಾಗಿ ಡಾ.ನಗೋಝಿ ಒಕೊಂಜೊ-ಇವೆಲಾರನ್ನು ನೇಮಕ ಮಾಡಲು ವಿಶ್ವ ವಾಣಿಜ್ಯ ಸಂಘಟನೆಯ ಸದಸ್ಯರುಗಳು ಸಮ್ಮತಿಸಿದ್ದಾರೆ. ನೈಜೀರಿಯದ ಮಾಜಿ ಹಣಕಾಸು ಸಚಿವೆ ಹಾಗೂ ವಿಶ್ವ ಬ್ಯಾಂಕ್ ನ ಮಾಜಿ ಆಡಳಿತ ನಿರ್ದೇಶಕಿಯಾಗಿರುವ ಡಾ.ನಗೋಝಿ ಮಾರ್ಚ್ 1ರಂದು ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ಜಾಗತಿಕ ವಾಣಿಜ್ಯ ಸಂಘಟನೆ ಹೇಳಿಕೆಯೊಂದರಲ್ಲಿ ತಿಳಿಸಿದೆ.
Next Story





