ತೆಂಕನಿಡಿಯೂರು ಗ್ರಾಪಂ: ಬಿಜೆಪಿ ಬೆಂಬಲಿತ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ

ಉಡುಪಿ, ಫೆ.15: ತೆಂಕನಿಡಿಯೂರು ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ತೆಂಕನಿಡಿಯೂರು ಎರಡನೆ ಕೆಳಾರ್ಕಳಬೆಟ್ಟು ವಾರ್ಡ್‌ನ ಸದಸ್ಯೆ ಗಾಯತ್ರಿ ಹಾಗು ಉಪಾಧ್ಯಕ್ಷರಾಗಿ ತೆಂಕನಿಡಿಯೂರು ಒಂದನೇ ಬೈಲಕೆರೆ ವಾರ್ಡ್‌ನ ಸದಸ್ಯ ಅರುಣ್ ಜತ್ತನ್ ಸೋಮವಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಇವರಿಬ್ಬರು ಬಿಜೆಪಿ ಬೆಂಬಲಿತ ವಿಜೇತ ಸದಸ್ಯರಾಗಿದ್ದು ಉಡುಪಿ ನಗರ ಬಿಜೆಪಿಯ ಪರವಾಗಿ ಅಧ್ಯಕ್ಷ ಮಹೇಶ್ ಠಾಕೂರ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಘವೇಂದ್ರ ಕಿಣಿ, ತಾಪಂ ಉಪಾಧ್ಯಕ್ಷ ಶರತ್ ಬೈಲಕೆರೆ, ಗ್ರಾಪಂ ಮಾಜಿ ಅಧ್ಯಕ್ಷ ಕೃಷ್ಣಯ್ಯ ಶೆಟ್ಟಿ ಹಾಗೂ ಪಕ್ಷದ ಪ್ರಮುಖರುಗಳು ಶುಭ ಹಾರೈಸಿದರು.
Next Story





