ಅಂಬಲಪಾಡಿ ಗ್ರಾಪಂ: ಬಿಜೆಪಿ ಬೆಂಬಲಿತ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ

ಉಡುಪಿ, ಫೆ.15: ಅಂಬಲಪಾಡಿ ಗ್ರಾಪಂ ಅಧ್ಯಕ್ಷರಾಗಿ 8ನೇ ಅಂಬಲಪಾಡಿ ಕಿದಿಯೂರು ಎರಡನೇ ವಾರ್ಡ್‌ನ ಸದಸ್ಯೆ ರೋಹಿಣಿ ಎಸ್ ಪೂಜಾರಿ ಹಾಗು ಉಪಾಧ್ಯಕ್ಷರಾಗಿ 8ನೆ ಅಂಬಲಪಾಡಿ ಒಂದನೇ ವಾರ್ಡ್‌ನ ಸದಸ್ಯ ಸೋಮನಾಥ್ ಬಿ.ಜೆ. ಸೋಮವಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಇವರಿಬ್ಬರು ಬಿಜೆಪಿ ಬೆಂಬಲಿತ ವಿಜೇತ ಸದಸ್ಯರಾಗಿದ್ದು ಉಡುಪಿ ನಗರ ಬಿಜೆಪಿಯ ಪರವಾಗಿ ಅಧ್ಯಕ್ಷ ಮಹೇಶ್ ಠಾಕೂರ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಘವೇಂದ್ರ ಕಿಣಿ, ನಗರ ಪಕ್ಷದ ಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಗಿರೀಶ್ ಎಂ.ಅಂಚನ್ ಹಾಗು ಪಕ್ಷದ ಪ್ರಮುಖರುಗಳು ಶುಭ ಹಾರೈಸಿದರು.
Next Story





