ದಕ್ಷಿಣ ಕನ್ನಡ, ಉಡುಪಿ ಜಿಲ್ಲಾ ಮಟ್ಟದ ದಫ್ ಸ್ಪರ್ಧಾ ಕಾರ್ಯಕ್ರಮ

ಬಂಟ್ವಾಳ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು, ಚಿಣ್ಣರ ಲೋಕ ಮೋಕೆದ ಕಲಾವಿದೆರ್ ಸೇವಾ ಟ್ರಸ್ಟ್ (ರಿ) ಬಂಟ್ವಾಳ ಇದರ ಜಂಟಿ ಆಶ್ರಯದಲ್ಲಿ ಬಿ ಸಿ ರೋಡಿನ ಗೋಲ್ಡನ್ ಪಾರ್ಕ್ ಮೈದಾನದ ಡಾ ಎಪಿಜೆ ಅಬ್ದುಲ್ ಕಲಾಂ ವೇದಿಕೆಯ ಶನಿವಾರದ ಮೂರನೇ ದಿನದ ಕಾರ್ಯಕ್ರಮದಲ್ಲಿ ಇಸ್ಲಾಮಿನ ಸಾಂಸ್ಕೃತಿಕ ಕಲೆಯಾಗಿರುವ ದಫ್ ಕಲಾ ಪ್ರದರ್ಶನ ನಡೆದಿದ್ದು, ಕಾರ್ಯಕ್ರಮಕ್ಕೆ ವಿಶೇಷ ಮೆರಗು ನೀಡಿತು.
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಜಿಲ್ಲಾ ಮಟ್ಟದ ದಫ್ ಸ್ಪರ್ಧಾ ಕಾರ್ಯಕ್ರಮವನ್ನು ಇರ್ಶಾದ್ ದಾರಿಮಿ ಅಲ್-ಜಝರಿ ಉದ್ಘಾಟಿಸಿದರು. ರಾಜ್ಯ ವಕ್ಫ್ ಬೋರ್ಡ್ ಸದಸ್ಯ ಶಾಫಿ ಸಅದಿ ನಂದಾವರ ಮುಖ್ಯ ಭಾಷಣಗೈದರು. ಎಸ್ಸೆಸ್ಸೆಫ್ ರಾಷ್ಟ್ರೀಯ ಅಧ್ಯಕ್ಷ ಕೆ.ಎಂ. ಅಬೂಬಕ್ಕರ್ ಸಿದ್ದೀಕ್ ಮೋಂಟುಗೋಳಿ, ಬಂಟ್ವಾಳ ಪುರಸಭಾ ಸದಸ್ಯ ಲುಕ್ಮಾನ್ ಬಿ ಸಿ ರೋಡು, ದ.ಕ. ಮತ್ತು ಉಡುಪಿ ಜಿಲ್ಲಾ ದಫ್ ಎಸೋಸಿಯೇಶನ್ ಉಪಾಧ್ಯಕ್ಷ ಅಬ್ದುಲ್ ರಝಾಕ್ ಕುಕ್ಕಾಜೆ, ಪ್ರಧಾನ ಕಾರ್ಯದರ್ಶಿ ಪಿ.ಎಂ. ಅಶ್ರಫ್ ಪಾಣೆಮಂಗಳೂರು, ಸದಸ್ಯರಾದ ಯು ಮುಸ್ತಫಾ ಆಲಡ್ಕ, ಆರ್.ಕೆ. ಮದನಿ ಅಮ್ಮೆಂಬಳ, ಕಲೋತ್ಸವ ಸಮಿತಿ ಅಧ್ಯಕ್ಷ ಸುದರ್ಶನ್ ಜೈನ್ ಪಂಜಿಕಲ್ಲು, ಗೌರವಾಧ್ಯಕ್ಷ ಪಿ ಜಯರಾಮ ರೈ, ಚಿಣ್ಣರ ಲೋಕ ಟ್ರಸ್ಟ್ ಅಧ್ಯಕ್ಷ ಮೋಹನದಾಸ್ ಕೊಟ್ಟಾರಿ, ಉದ್ಯಮಿ ಜಗನ್ನಾಥ ಚೌಟ, ಕಲೋತ್ಸವ ಸಮಿತಿ ಗೌರವ ಸಲಹೆಗಾರರಾದ ಪ್ರಕಾಶ್ ಶೆಟ್ಟಿ ಶ್ರೀ ಶೈಲ ತುಂಬೆ, ರತ್ನದೇವ ಪೂಂಜಾಲಕಟ್ಟೆ, ನಿರ್ದೇಶಕ ಶಿವಪ್ರಸಾದ್ ಬಂಟ್ವಾಳ, ನ್ಯಾಯವಾದಿ ಉಮೇಶ್ ಕುಮಾರ್ ವೈ ಮೊದಲಾದವರು ಭಾಗವಹಿಸಿದ್ದರು.
ಕರಾವಳಿ ದಫ್ ಸ್ಪರ್ಧಾ ಕಾರ್ಯಕ್ರಮದ ಸಂಚಾಲಕ ಮುಹಮ್ಮದ್ ನಂದಾವರ ಸ್ವಾಗತಿಸಿದರು. ದಫ್ ಎಸ್ಸೋಸಿಯೇಶನ್ ಅಧ್ಯಕ್ಷ ಅಬ್ದುಲ್ ಲತೀಫ್ ನೇರಳಕಟ್ಟೆ ವಂದಿಸಿ, ಕಾರ್ಯಕ್ರಮ ನಿರೂಪಿಸಿದರು. ಇದೇ ವೇಳೆ ದಫ್ ಸ್ಪರ್ಧಾ ಕಾರ್ಯಕ್ರಮದ ಸಂಚಾಲಕ ಮುಹಮ್ಮದ್ ನಂದಾವರ ಅವರನ್ನು ಕಲೋತ್ಸವ ಸಮಿತಿಯ ವತಿಯಿಂದ ಸನ್ಮಾನಿಸಲಾಯಿತು.
ದಫ್ ಸ್ಪರ್ಧಾ ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಪ್ರತಿಷ್ಠಿತ ದಫ್ ತಂಡಗಳಾದ ಅಲ್-ಅಮೀನ್ ದಫ್ ತಂಡ ಶಿರ್ವ-ಮಂಚಕಲ್, ಖಲಂದರ್ ಷಾ ದಫ್ ತಂಡ ಮಣಿಪುರ-ಕಟಪಾಡಿ, ರಿಫಾಯಿಯಾ ದಫ್ ತಂಡ ಪಂಜಿಮೊಗರು-ಕೂಳೂರು, ಲಜ್‍ನತುಲ್ ಅನ್ಸಾರಿಯಾ ದಫ್ ತಂಡ ಕೃಷ್ಣಾಪುರ, ಖುವ್ವತುಲ್ ಇಸ್ಲಾಂ ದಫ್ ತಂಡ ಪೊಲಿಪು-ಕಾಪು, ಅಂಜುಮಾನ್ ಸಿರಾಜುಲ್ ಇಸ್ಲಾಂ ದಫ್ ತಂಡ ಮುಕ್ಕ-ಮಂಗಳೂರು, ಸಿರಾಜುಲ್ ಹುದಾ ದಫ್ ತಂಡ ಮಜೂರು-ಕಾಪು, ತ್ವೈಬಾ ದಫ್ ತಂಡ ಬಜಾಲ್-ನಂತೂರು, ರಿಫಾಯಿಯಾ ದಫ್ ತಂಡ ಕೈಕಂಬ-ಬಿ.ಸಿ.ರೋಡು, ಅಲ್-ಫಝಲ್ ದಫ್ ತಂಡ ಪಂಜಿಕಲ್ಲು-ಇರಾ ಭಾಗವಹಿಸಿದ್ದು, ಈ ಪೈಕಿ ಅಲ್-ಅಮೀನ್ ದಫ್ ತಂಡ ಶಿರ್ವ-ಮಂಚಕಲ್, ಖಲಂದರ್ ಷಾ ದಫ್ ತಂಡ ಮಣಿಪುರ-ಕಟಪಾಡಿ, ಸಿರಾಜುಲ್ ಹುದಾ ದಫ್ ತಂಡ ಮಜೂರು-ಕಾಪು, ರಿಫಾಯಿಯಾ ದಫ್ ತಂಡ ಕೈಕಂಬ-ಬಿ.ಸಿ.ರೋಡು ಈ ನಾಲ್ಕು ತಂಡಗಳು ಸಮಾನ ಅಂಕಗಳನ್ನು ಗಳಿಸಿ ಮೊದಲ ಸ್ಥಾನಕ್ಕೆ ಅವಕಾಶ ಪಡೆಯಿತು. ಬಳಿಕ ಚೀಟಿ ಎತ್ತುವ ಮೂಲಕ ನಡೆದ ಅದೃಷ್ಟ ಪರೀಕ್ಷೆಯಲ್ಲಿ ಖಲಂದರ್ ಷಾ ದಫ್ ತಂಡ ಮಣಿಪುರ-ಕಟಪಾಡಿ ಪ್ರಥಮ ಸ್ಥಾನ ಪಡೆದುಕೊಂಡರೆ, ರಿಫಾಯಿಯಾ ದಫ್ ತಂಡ ಕೈಕಂಬ-ಬಿ.ಸಿ.ರೋಡು ದ್ವಿತೀಯ, ಅಲ್-ಅಮೀನ್ ದಫ್ ತಂಡ ಶಿರ್ವ-ಮಂಚಕಲ್ ತೃತೀಯ ಹಾಗೂ ಸಿರಾಜುಲ್ ಹುದಾ ದಫ್ ತಂಡ ಮಜೂರು-ಕಾಪು ತಂಡವು ಚತುರ್ಥ ಸ್ಥಾನ ಪಡೆದುಕೊಂಡಿತು.

















