ಗಿನಿ ದೇಶದಲ್ಲಿ ಹರಡುತ್ತಿರುವ ‘ಎಬೋಲಾ’ ಸಾಂಕ್ರಾಮಿಕ

ಕೊನಾಕ್ರಿ (ಗಿನಿ), ಫೆ. 15: ಗಿನಿ ದೇಶದಲ್ಲಿ ಎಬೋಲಾ ಸಾಂಕ್ರಾಮಿಕಕ್ಕೆ ಮೂವರು ಬಲಿಯಾದ ಹಾಗೂ ನಾಲ್ವರು ಕಾಯಿಲೆಪೀಡಿತರಾದ ಬಳಿಕ, ದೇಶದಲ್ಲಿ ಈ ಮಾರಕ ಸಾಂಕ್ರಾಮಿಕ ಹರಡುತ್ತಿರುವುದಾಗಿ ಘೋಷಿಸಲಾಗಿದೆ.
ಲೈಬೀರಿಯ ದೇಶದ ಗಡಿ ಸಮೀಪದ ಪಟ್ಟಣವೊಂದರಲ್ಲಿ ಅಂತ್ಯಸಂಸ್ಕಾರವೊಂದಕ್ಕೆ ಹಾಜರಾದ ಬಳಿಕ ಈ ಏಳು ಮಂದಿ ಕಾಯಿಲೆಪೀಡಿತರಾಗಿದ್ದರು. ಅವರು ಅತಿಸಾರ, ವಾಂತಿ ಮತ್ತು ರಕ್ತಸ್ರಾವದಿಂದ ಬಳಲುತ್ತಿದ್ದರು.
‘‘ಈ ಪರಿಸ್ಥಿತಿಯನ್ನು ಗಮನದಲ್ಲಿರಿಸಿಕೊಂಡು ಹಾಗೂ ಅಂತರ್‌ರಾಷ್ಟ್ರೀಯ ಆರೋಗ್ಯ ನಿಯಮಾವಳಿಗಳನ್ವಯ ಗಿನಿ ಸರಕಾರವು ದೇಶದಲ್ಲಿ ಎಬೋಲಾ ಸಾಂಕ್ರಾಮಿಕ ಅಸ್ತಿತ್ವದಲ್ಲಿದೆ ಎಂಬುದಾಗಿ ಘೋಷಿಸಿದೆ’’ ಎಂದು ರವಿವಾರ ಆರೋಗ್ಯ ಸಚಿವಾಲಯವು ಹೇಳಿಕೆಯೊಂದರಲ್ಲಿ ತಿಳಿಸಿದೆ.
Next Story