ಸುಮಾರು 18-19 ಕೋವಿಡ್ ಲಸಿಕೆಗಳು ಅಭಿವೃದ್ಧಿಗೊಳ್ಳುತ್ತಿವೆ:ಸಚಿವ ಹರ್ಷವರ್ಧನ್

ಹೊಸದಿಲ್ಲಿ,ಫೆ.15: ಕೋವಿಡ್-19ರ ವಿರುದ್ಧ ಸುಮಾರು 18-19 ಲಸಿಕೆಗಳು ಅಭಿವೃದ್ಧಿಗೊಳ್ಳುತ್ತಿವೆ ಮತ್ತು ವಿವಿಧ ಕ್ಲಿನಿಕಲ್ ಟ್ರಯಲ್ ಹಂತಗಳಲ್ಲಿವೆ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಅವರು ಸೋಮವಾರ ಇಲ್ಲಿ ತಿಳಿಸಿದರು.
ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಅವರು,50 ವರ್ಷ ಮೇಲಿನ ಪ್ರಾಯದವರಿಗೆ ಕೋವಿಡ್ -19 ವಿರುದ್ಧ ಲಸಿಕೆ ನೀಡಿಕೆಯು ಮುಂದಿನ 2-3 ವಾರಗಳಲ್ಲಿ ಆರಂಭಗೊಳ್ಳಲಿದೆ ಎಂದು ಹೇಳಿದರು.
ಭಾರತವು ಇತರ 20-25 ದೇಶಗಳಿಗೆ ಲಸಿಕೆಗಳನ್ನು ಪೂರೈಸಲಿದೆ ಎಂದ ಅವರು,ಲಸಿಕೆಗಳು ಸುರಕ್ಷಿತ ಮತ್ತು ಪರಿಣಾಮಕಾರಿಯಾಗಿವೆ ಎಂದು ಹೇಳುವ ಮೂಲಕ ಅವುಗಳ ಕುರಿತು ಸೃಷ್ಟಿಯಾಗಿರುವ ವದಂತಿಗಳನ್ನು ತಳ್ಳಿಹಾಕಿದರು.
ಕಳೆದ ಏಳು ದಿನಗಳಲ್ಲಿ ದೇಶದ 188 ಜಿಲ್ಲೆಗಳಲ್ಲಿ ಮತ್ತು ಕಳೆದ 21 ದಿನಗಳಲ್ಲಿ 21 ಜಿಲ್ಲೆಗಳಲ್ಲಿ ಯಾವುದೇ ಹೊಸ ಕೊರೋನವೈರಸ್ ಪ್ರಕರಣ ವರದಿಯಾಗಿಲ್ಲ ಎಂದು ತಿಳಿಸಿದ ಸಚಿವರು ಕೋವಿಡ್ ಶಿಷ್ಟಾಚಾರಗಳ ಪಾಲನೆಯನ್ನು ಮುಂದುವರಿಸುವಂತೆ ಜನರನ್ನು ಆಗ್ರಹಿಸಿದರು.
Next Story





