ಉಪ್ಪಳ: ಯುವಕನ ಮೇಲೆ ತಂಡದಿಂದ ತಲವಾರು ದಾಳಿ

ಉಪ್ಪಳ, ಫೆ.16: ಯುವಕನೋರ್ವನ ಮೇಲೆ ತಂಡವೊಂದು ತಲವಾರು ದಾಳಿ ನಡೆಸಿ ಗಾಯಗೊಳಿಸಿದ ಘಟನೆ ಮಂಗಳವಾರ ಮಧ್ಯಾಹ್ನ ಉಪ್ಪಳ ಪೇಟೆಯಲ್ಲಿ ನಡೆದಿದೆ.
ಉಪ್ಪಳ ಮಣಿಮುಂಡ ನಿವಾಸಿ ಮುಹಮ್ಮದ್ ಹರ್ಶಿದ್(33) ಗಾಯಗೊಂಡವರು. ಅವರನ್ನು ಕುಂಬಳೆಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪತ್ನಿ ಮತ್ತು ಮಕ್ಕಳ ಜೊತೆ ಉಪ್ಪಳ ಪೇಟೆಗೆ ಬಂದಿದ್ದ ಸಂದರ್ಭದಲ್ಲಿ ಈ ಕೃತ್ಯ ಎಸಗಲಾಗಿದೆ. ಹರ್ಶಿದ್ ಅಂಗಡಿಯಿಂದ ಸಾಮಗ್ರಿ ಖರೀದಿಸುತ್ತಿದ್ದ ಸಂದರ್ಭದಲ್ಲಿ ಮೂವರ ತಂಡ ದಾಳಿ ನಡೆಸಿ, ತಲವಾರಿನಿಂದ ಕಡಿದು ಪರಾರಿಯಾಗಿದೆ ಎನ್ನಲಾಗಿದೆ. ಕೃತ್ಯಕ್ಕೆ ಕಾರಣ ತಿಳಿದುಬಂದಿಲ್ಲ.
ಈ ಬಗ್ಗೆ ಮಂಜೇಶ್ವರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
Next Story





