ಫೆ.28ರಂದು ಮುಸ್ಲಿಂ ಮಹಿಳೆಯರಿಗಾಗಿ ಭಾಷಣ ಸ್ಪರ್ಧೆ
ಫೆ.19-28: ಜಮಾಅತೇ ಇಸ್ಲಾಮೀ ಹಿಂದ್ ನಿಂದ ‘ಸದೃಢ ಕುಟುಂಬ, ಸುಭದ್ರ ಸಮಾಜ’ ರಾಷ್ಟ್ರೀಯ ಅಭಿಯಾನ
ಮಂಗಳೂರು, ಫೆ.16: ಜಮಾಅತೇ ಇಸ್ಲಾಮೀ ಹಿಂದ್ ಮಹಿಳಾ ವಿಭಾಗ ಹಮ್ಮಿಕೊಂಡಿರುವ ‘ಸದೃಢ ಕುಟುಂಬ, ಸುಭದ್ರ ಸಮಾಜ’ ಎಂಬ ಧ್ಯೇಯ ವಾಕ್ಯದಡಿ ಫೆ.19ರಿಂದ ರಾಷ್ಟ್ರೀಯ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಈ ಪ್ರಯುಕ್ತ ವಿವಿಧ ಕಾರ್ಯಕ್ರಮ ಹಾಗೂ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತಿದ್ದು, ಫೆ.28ರಂದು 30 ವರ್ಷ ಮೇಲ್ಪಟ್ಟ ಮುಸ್ಲಿಂ ಮಹಿಳೆಯರಿಗಾಗಿ ಭಾಷಣ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ.
‘ಕೌಟುಂಬಿಕ ಸಾಮರಸ್ಯ ಕಾಪಾಡುವಲ್ಲಿ ಮಹಿಳೆಯರ ಪಾತ್ರ’ ಎಂಬ ವಿಷಯದಲ್ಲಿ ಕನ್ನಡ, ಇಂಗ್ಲಿಷ್, ಬ್ಯಾರಿ, ಉರ್ದು ಈ ಯಾವುದಾದರೊಂದು ಭಾಷೆಯಲ್ಲಿ 5-7 ನಿಮಿಷಗಳಿಗೆ ಸೀಮಿತವಾಗಿ ಮಾತನಾಡಲು ಅವಕಾಶವಿದೆ. ಆಸಕ್ತರು ಫೆ.25ರ ಒಳಗಾಗಿ ತಮ್ಮ ಹೆಸರನ್ನು ಮೊ.ಸಂ.: 94801469807ಕ್ಕೆ ಕರೆ ಅಥವಾ ವಾಟ್ಸ್ ಆ್ಯಪ್ ಮೂಲಕ ಸಂಪರ್ಕಿಸಿ, ನೋಂದಾಯಿಸಬಹುದು ಎಂದು ಪ್ರಕಟನೆ ತಿಳಿಸಿದೆ.
ವಿಜೇತರಿಗೆ ಪ್ರಶಸ್ತಿ ಪತ್ರ ಮತ್ತು ನಗದು ಬಹುಮಾನ ನೀಡಲಾಗುವುದು. ಸ್ಪರ್ಧೆಯು ಫೆ.28ರಂದು ಬೆಳಗ್ಗೆ 10:30ಕ್ಕೆ ಕಂಕನಾಡಿಯ ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ಸಭಾಂಗಣದಲ್ಲಿ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.





