ಉಡುಪಿ: ರಸ್ತೆ ಕಾಮಗಾರಿ; ವಾಹನ ಸಂಚಾರಕ್ಕೆ ಬದಲಿ ವ್ಯವಸ್ಥೆ
ಉಡುಪಿ, ಫೆ.16: ಉಡುಪಿ ನಗರಸಭಾ ವ್ಯಾಪ್ತಿಯ ಮಿಷನ್ ಆಸ್ಪತ್ರೆ-ಕೊರಂಗ್ರಪಾಡಿ ರಸ್ತೆಯನ್ನು ನಗರೋತ್ಥಾನ-3ರಡಿ ಅಭಿವೃದ್ಧಿ ಪಡಿಸಲಾಗುತ್ತಿದ್ದು, ಈ ರಸ್ತೆಯಲ್ಲಿ ಹಾಲಿ ಇರುವ ಕಲ್ವರ್ಟ್ ದುರಸ್ಥಿ ಪಡಿಸುವ ಹಿನ್ನೆಲೆಯಲ್ಲಿ, ಫೆ.17ರಿಂದ ಮಾರ್ಚ್ 31 ರವರೆಗೆ ಈ ರಸ್ತೆಯಲ್ಲಿ ವಾಹನ ಸಂಚಾರ ನಿಷೇಧಿಸಲಾಗಿದೆ.
ಇದರಿಂದ ಉಡುಪಿ ಕಡೆಗೆ ಸಂಚರಿಸುವ ವಾಹನಗಳು ಕೊರಂಗ್ರಪಾಡಿ ಜಂಕ್ಷನ್‌ನಿಂದ ರಾಷ್ಟ್ರೀಯ ಹೆದ್ದಾರಿ ಮತ್ತು ಕುಕ್ಕಿಕಟ್ಟೆ ಮಾರ್ಗವಾಗಿ ಸಂಚರಿಸುವಂತೆ ನಗರಸಬೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story





