ರಾಮಾಜೋಯಿಸ್‌ಗೆ ನಿಧನಕ್ಕೆ ಪೇಜಾವರಶ್ರೀ ಸಂತಾಪ
ಉಡುಪಿ, ಫೆ.16: ರಾಮಾಜೋಯಿಸ್ ಅವರ ನಿಧನದೊಂದಿಗೆ ಓರ್ವ ಶ್ರೇಷ್ಠ ನ್ಯಾಯವೇತ್ತರೂ, ಧೀಮಂತ ರಾಜನೀತಿಜ್ಞರನ್ನು ಕಳೆದುಕೊಂಡಿದ್ದೇವೆ ಎಂದು ಪೇಜಾವರ ಮಠದ ಶ್ರೀವಿಶ್ವಪ್ರಸನ್ನ ತೀರ್ಥರು ಸಂತಾಪ ವ್ಯಕ್ತಪಡಿಸಿದ್ದಾರೆ.
ರಾಮಾಜೋಯಿಸ್ ಅವರಿಗೆ ಸನಾತನ ಧರ್ಮಸಂಸ್ಕೃತಿಯ ಬಗೆಗಿದ್ದ ತಲಸ್ಪರ್ಶಿ ಅರಿವು, ಚಿಂತನೆ ಮತ್ತು ಆ ನೆಲೆಯಲ್ಲಿ ದೇಶಕ್ಕೆ ಅವರು ನೀಡಿದ ಮಾರ್ಗದರ್ಶನ ಗಮನಾರ್ಹವಾದುದು. ಶ್ರೀಮಠದೊಂದಿಗೆ ವಿಶೇಷ ಬಾಂಧವ್ಯ ಹೊಂದಿದ್ದ ಅವರ ದಿವ್ಯಾತ್ಮಕ್ಕೆ ಭಗವಂತ ಸದ್ಗತಿಯನ್ನು ಕರುಣಿಸಲಿ ಎಂದು ಪ್ರಾರ್ಥಿಸುತ್ತೇವೆ ಎಂದು ಪೇಜಾವರಶ್ರೀಗಳು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಬಿಜೆಪಿ ಸಂತಾಪ: ಜಸ್ಟೀಸ್ ರಾಮಾಜೋಯಿಸ್ ಅವರ ನಿಧನಕ್ಕೆ ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಸಮಾಜಕ್ಕೆ ಮಾರ್ಗದರ್ಶಕರಾಗಿದ್ದು, ಹಲವಾರು ಸಮಾಜಮುಖಿ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡವರು ಎಂದು ನಾಯಕ್ ತಿಳಿಸಿದ್ದಾರೆ.
Next Story





