ಪುರುಷೋತ್ತಮ ಬಿಳಿಮಲೆ, ಸುಬ್ರಾಯ ಚೊಕ್ಕಾಡಿ ಸೇರಿ ಆರು ಮಂದಿಗೆ ಮಾಸ್ತಿ ಪ್ರಶಸ್ತಿ

ಬೆಂಗಳೂರು, ಫೆ.16: ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಟ್ರಸ್ಟ್ ಕೊಡಮಾಡುವ 2020ನೇ ಸಾಲಿನ ಮಾಸ್ತಿ ಪ್ರಶಸ್ತಿಗೆ ಹಿರಿಯ ಸಂಶೋಧಕ ಪ್ರೊ.ಪುರುಷೋತ್ತಮ ಬಿಳಿಮಲೆ, ವಿಮರ್ಶಕ ಎನ್.ಆರ್.ವಿಜಯಶಂಕರ್, ಕತೆಗಾರ ಕೇಶವರೆಡ್ಡಿ ಹಂದ್ರಾಳ, ಹಿರಿಯ ಕವಿ ಸುಬ್ರಾಯ ಚೊಕ್ಕಾಡಿ, ಸ.ರಘುನಾಥ ಹಾಗೂ ಸಂಧ್ಯಾ ಎಸ್.ಪೈ ಆಯ್ಕೆಯಾಗಿದ್ದಾರೆ.
ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ 129ನೇ ಸಂಸ್ಮರಣ ವರ್ಷದ ನೆನಪಿನಲ್ಲಿ ಈ ಪ್ರಶಸ್ತಿ ಕೊಡಲಾಗುತ್ತಿದೆ. ಪ್ರಶಸ್ತಿಯು ತಲಾ 25 ಸಾವಿರ ರೂ.ನಗದು, ಫಲಕ ಒಳಗೊಂಡಿದೆ. ಮಾ.27ರಂದು ನಗರದ ಭಾರತೀಯ ವಿದ್ಯಾಭವನದಲ್ಲಿ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತದೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.
Next Story





