ಮಂದಾರ್ತಿ ಜಾತ್ರೆಗೆ ಬಂದಿದ್ದ ಇಬ್ಬರು ಮಹಿಳೆಯರು ನಾಪತ್ತೆ
ಬ್ರಹ್ಮಾವರ, ಫೆ.16: ಮಂದಾರ್ತಿ ಶ್ರೀದುರ್ಗಾಪರಮೇಶ್ವರಿ ಜಾತ್ರೆಗೆ ಬಂದಿದ್ದ ಇಬ್ಬರು ಮಹಿಳೆಯರು ನಾಪತ್ತೆಯಾಗಿರುವ ಘಟನೆ ಫೆ.14ರಂದು ಮಧ್ಯಾಹ್ನ ವೇಳೆ ನಡೆದಿದೆ.
ನಾಪತ್ತೆಯಾದವರನ್ನು ಬೆಳಗಾಂ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಬಂಡು ಅಪ್ಪಾಸಾಬ ದಾನವಾಡೆ ಎಂಬವರ ಪತ್ನಿ ಬ್ರಹ್ಮಾವರ ಬೈಕಾಡಿ ಮೂಲದ ಜ್ಯೋತಿ(30) ಹಾಗೂ ಅವರ ತಮ್ಮನ ಪತ್ನಿ ಪ್ರಿಯಾಂಕ(24) ಎಂದು ಗುರುತಿಸಲಾಗಿದೆ.
ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





