ಬೋಟಿನಿಂದ ಸಮುದ್ರಕ್ಕೆ ಬಿದ್ದು ಮೀನುಗಾರ ಮೃತ್ಯು
ಗಂಗೊಳ್ಳಿ, ಫೆ.16: ಆಳ ಸಮುದ್ರ ಮೀನುಗಾರಿಕೆ ವೇಳೆ ಬೋಟಿನಿಂದ ನೀರಿಗೆ ಬಿದ್ದು ಮೀನುಗಾರರೊಬ್ಬರು ಮೃತಪಟ್ಟ ಘಟನೆ ನಡೆದಿದೆ.
ಮೃತರನ್ನು ಬಸ್ರೂರು ಬಾಳೆಹಿತ್ಲು ನಿವಾಸಿ ಕೊರಗ ಮೊಗವೀರ ಎಂಬವರ ಮಾಲಿಂಗ ಮೊಗವೀರ(55) ಎಂದು ಗುರುತಿಸಲಾಗಿದೆ.
ಇವರು ಫೆ.14ರಂದು ನಾರಾಯಣ ಖಾರ್ವಿ ಎಂಬವರ ಅನ್ನಪೂರ್ಣೇಶ್ವರಿ ಬೋಟಿನಲ್ಲಿ ಮೀನುಗಾರಿಕೆಗೆ ತೆರಳಿದ್ದು, ಫೆ.15ರಂದು ರಾತ್ರಿ 9:30ರ ಸುಮಾರಿಗೆ ಗಂಗೊಳ್ಳಿ ಬಂದರಿನಿಂದ 35 ಕಿ.ಮೀ ದೂರ ಆಳ ಸಮುದ್ರದಲ್ಲಿ ಬಲೆ ಎಳೆಯುತ್ತಿರುವಾಗ ದೊಡ್ಡ ಅಲೆ ಬಂದ ಪರಿಣಾಮ ಮಾಲಿಂಗ ಆಕಸ್ಮಿಕವಾಗಿ ಕಾಲು ಜಾರಿ ನೀರಿಗೆ ಬಿದ್ದು ಮೃತಪಟ್ಟಿದ್ದಾರೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





