ತೋನ್ಸೆ ವಾಲಿಬಾಲ್ ಲೀಗ್ ಟ್ರೋಫಿ: ನೇಜಾರ್ ಫ್ರೆಂಡ್ಸ್‌ಗೆ ಪ್ರಶಸ್ತಿ

ಉಡುಪಿ, ಫೆ.16: ಸಾಲಿಹಾತ್ ಶಾಲೆಯ ಕ್ರೀಡಾಂಗಣದಲ್ಲಿ ಇತ್ತೀಚೆಗೆ ಏರ್ಪಡಿಸಲಾದ ‘ತೋನ್ಸೆ ವಾಲಿಬಾಲ್ ಲೀಗ್-2021’ ವಾಲಿಬಾಲ್ ಪಂದ್ಯಾಟದಲ್ಲಿ ನೇಜಾರ್ ಫ್ರೆಂಡ್ಸ್ ತಂಡ 15ಸಾವಿರ ರೂ. ನಗದು ಮತ್ತು ಟ್ರೋಫಿಯನ್ನು ಗೆದ್ದುಕೊಂಡಿತು.
ಹೂಡೆಯ ಆಸುಪಾಸಿನ ವಾಲಿಬಾಲ್ ಆಟಗಾರರಿಗಾಗಿ ಹಮ್ಮಿಕೊಳ್ಳಲಾದ ಈ ಪಂದ್ಯಾಟದಲ್ಲಿ ಆಹ್ವಾನಿತ ಎಂಟು ತಂಡಗಳು ಭಾಗವಹಿಸಿದ್ದವು. ಹೂಡೆ ಫ್ರೆಂಡ್ಸ್ ರನ್ನರ್ಸ್ ಅಪ್ ಪ್ರಶಸ್ತಿ ಪಡೆದುಕೊಂಡಿತು.
ಪಂದ್ಯಾಟವನ್ನು ರಾಜ್ಯಮಟ್ಟದ ವಾಲಿಬಾಲ್ ಆಟಗಾರ ಸಮೀರ್ ಕುಂದಾ ಪುರ, ಸಾಲಿಹಾತ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಜಿ.ಇಮ್ತಿಯಾಝ್, ದಾರುಸಲಾಂ ಶಾಲೆಯ ವಿಶ್ವಸ್ಥ ಮಂಡಳಿಯ ಸದಸ್ಯ ಜುನೈದ್ ಜೊತೆಯಾಗಿ ಉದ್ಘಾಟಿಸಿದರು. ಸಾಲಿಹಾತ್ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಅಸ್ಲಂ ಹೈಕಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಮಾರೋಪ ಸಮಾರಂಭದಲ್ಲಿ ಜಮಾಅತೆ ಇಸ್ಲಾಮಿ ಹಿಂದ್ ಹೂಡೆ ಘಟಕದ ಅಧ್ಯಕ್ಷ ಅಬ್ದುಲ್ ಖಾದರ್, ಗ್ರಾಪಂ ಸದಸ್ಯ ಇದ್ರಿಸ್ ಹೂಡೆ, ಹೈದರ್ ಅಲಿ, ಡಾ.ಫಹೀಮ್ ಹಾಗೂ ಸ್ಥಳೀಯ ಹಿರಿಯರಾದ ಬಾವಜಾನ, ಕಯ್ಯುಮ್ ವಿಜೇತರಿಗೆ ಬಹುಮಾನ ವಿತರಿಸಿದರು. ಸಂಯೋಜಕ ನಾಕ್ವಾ ಅಲ್ತಾಫ್ ಉಪಸ್ಥಿತರಿದ್ದರು. ವೀಕ್ಷಕ ವಿವರಣೆಯನ್ನು ರಹಮತ್ ಪೆರ್ಲಕಡಿ ನಡೆಸಿದರು. ಯಾಸೀನ್ ಕೋಡಿಬೆಂಗ್ರೆ ಕಾರ್ಯಕ್ರಮ ನಿರೂಪಿಸಿದರು.





