ತೋನ್ಸೆ ಗ್ರಾಪಂ: ಅಧ್ಯಕ್ಷ ಲತಾ, ಉಪಾಧ್ಯಕ್ಷ ನಿತ್ಯಾನಂದ

ಉಡುಪಿ, ಫೆ.16: ತೋನ್ಸೆ ಗ್ರಾಪಂನ ಅಧ್ಯಕ್ಷರಾಗಿ ಲತಾ ಅವಿರೋಧವಾಗಿ ಮತ್ತು ಉಪಾಧ್ಯಕ್ಷರಾಗಿ ನಿತ್ಯಾನಂದ ಕೆಮ್ಮಣ್ಣು ಚುನಾವಣೆಯ ಮೂಲಕ ಆಯ್ಕೆಯಾಗಿದ್ದಾರೆ.
ಗ್ರಾಪಂನಲ್ಲಿ ಪಕ್ಷಗಳ ಬಲಾಬಲದಂತೆ ಕಾಂಗ್ರೆಸ್ ಬೆಂಬಲಿಗರು 9, ಬಿಜೆಪಿ ಬೆಂಬಲಿಗರು 6, ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಬೆಂಬಲಿಗರು 5 ಮತ್ತು ಎಸ್‌ಡಿಪಿಐನ ಒಬ್ಬರು ಸದಸ್ಯರಿದ್ದಾರೆ.
ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ ನಿತ್ಯಾನಂದ ಕೆಮ್ಮಣ್ಣು ಹಾಗೂ ಬಿಜೆಪಿ ಬೆಂಬಲಿತ ಪುರಂದರ ಟಿ.ಕುಂದರ್ ಸ್ಪರ್ಧಿಸಿದ್ದರು. ಈ ಹಿನ್ನೆಲೆಯಲ್ಲಿ ನಡೆದ ಗೌಪ್ಯ ಮತದಾನದಲ್ಲಿ ನಿತ್ಯಾನಂದ ಕೆಮ್ಮಣ್ಣು 15 ಮತಗಳನ್ನು ಪಡೆದು ಉಪಾಧ್ಯಕ್ಷರಾಗಿ ಆಯ್ಕೆಯಾದರು. ಪುರಂದರ ಕುಂದರ್ 6 ಮತಗಳನ್ನು ಮಾತ್ರ ಪಡೆದುಕೊಂಡರು.
Next Story





