ಬೆಳಪು ಗ್ರಾಪಂ: ಅಧ್ಯಕ್ಷ ಶೋಭಾ, ಉಪಾಧ್ಯಕ್ಷ ಶರತ್

ಕಾಪು, ಫೆ.16: ಬೆಳಪು ಗ್ರಾಪಂ ಅಧ್ಯಕ್ಷರಾಗಿ ಬೆಳಪು ಗ್ರಾಮಾಭಿವೃದ್ಧಿ ಸಮಿತಿ ಬೆಂಬಲಿತ ಶೋಭಾ ಜಿ.ಭಟ್ ಹಾಗೂ ಶರತ್ ಕುಮಾರ್ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
11 ಸದಸ್ಯ ಬಲದ ಗ್ರಾಪಂನಲ್ಲಿ ಗ್ರಾಮಾಭಿವೃದ್ಧಿ ಬೆಂಬಲಿತ 8, ಬಿಜೆಪಿ ಬೆಂಬಲಿತ 1 ಹಾಗೂ ಎಸ್‌ಡಿಪಿಐ ಬೆಂಬಲಿತ 2 ಸದಸ್ಯರು ಚುನಾಯಿತರಾಗಿದ್ದರು. ವೀಣಾ ವಿವೇಕಾನಂದ ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವ ಹಿಸಿದರು. ಆಡಳಿತಾಧಿಕಾರಿ ಸಂತೋಷ್, ಪಿಡಿಒ ರಮೇಶ್ ಹಾಗೂ ಕಾರ್ಯ ದರ್ಶಿ ಸುಮಿತ್ರ ಚುನಾವಣೆ ಪ್ರಕ್ರಿಯೆಯಲ್ಲಿ ಸಹಕರಿಸಿದರು.
Next Story





