ಹರೇಕಳ: ‘ಖಿಯಾ-ದಾರುಲ್ ಮರಿಯಮ್’ ಹಸ್ತಾಂತರ

ಮಂಗಳೂರು,ಫೆ.16:ಹರೇಕಳ ನ್ಯೂಪಡ್ಪುವಿನ ಖಿದ್ಮತುಲ್ ಇಸ್ಲಾಮ್ ಯಂಗ್‌ಮೆನ್ಸ್ ಅಸೋಸಿಯೇಶನ್‌ನ ಅಧೀನದಲ್ಲಿ ಹೆಲ್ಪ್ಫಾರ್ ಮರಿಯಮ್ಮ ವಾಟ್ಸಾಪ್ ಗ್ರೂಪ್ ಸಹಕಾರದಲ್ಲಿ ನ್ಯೂಪಡ್ಪುಜಮಾಅತಿಗೊಳಪಟ್ಟ ವಿಧವೆ ಮರಿಯಮ್ಮ ಮತ್ತವರ ವಿಧವೆ ಮಗಳಿಗೆ ಆಸರೆಯಾಗಿ ನಿರ್ಮಿಸಿದ ಕಾರುಣ್ಯ ಯೋಜನೆ ‘ಖಿಯಾ-ದಾರುಲ್ ಮರಿಯಮ್’ನ ಉದ್ಘಾಟನೆ ಮತ್ತು ಕೀಲಿ ಕೈ ಹಸ್ತಾಂತರ ಕಾರ್ಯಕ್ರಮವು ರವಿವಾರ ನ್ಯೂಪಡ್ಪುವಿನಲ್ಲಿ ನಡೆಯಿತು.
ಅಸೈಯದ್ ಶರಪುದ್ದೀನ್ ತಂಙಳ್ ಅಲ್ ಹೈದ್ರೋಸಿ ಎಮ್ಮೆಮಾಡ್ ನೂತನ ಮನೆಯನ್ನು ಉದ್ಘಾಟಿಸಿದರು. ಅತಿಥಿಗಳಾಗಿ ತ್ವಾಹಾ ಜುಮಾ ಮಸೀದಿಯ ಖತೀಬ್ ಅಬ್ದುಲ್ ಬಾರಿ ಸಆದಿ, ರೌಲತುಲ್ ಉಲೂಮ್ ಮದ್ರಸ ನ್ಯೂಪಡ್ಪುಇದರ ಅಧ್ಯಾಪಕರಾದ ಅಬ್ದುಲ್ ಹಮೀದ್ ಮದನಿ, ಮುಹಮ್ಮದ್ ಮುಸ್ತಫಾ ಸಅದಿ, ಅಬ್ದುಲ್ ರಝಕ್ ಮುಸ್ಲಿಯಾರ್, ಟಿಜೆಎಮ್ ನ್ಯೂಪಡ್ಪುಇದರ ಅಧ್ಯಕ್ಷ ಹಾಜಿ ಬಿ ಖಾಲಿದ್, ಉಪಾಧ್ಯಕ್ಷರಾದ ಮುಹಮ್ಮದ್ ಮೋನು ಟಿಎಂ, ಅಬ್ದುಲ್ ಲತೀಫ್ ಯು., ಅಬ್ದುಲ್ ಅಝೀಝ್, ಹರೇಕಳ ಗ್ರಾಪಂ ಅಧ್ಯಕ್ಷ ಬದ್ರುದ್ದೀನ್ ಫರೀದ್‌ನಗರ, ಹರೇಕಳ ಗ್ರಾಪಂ ಸದಸ್ಯರಾದ ಅಬ್ದುಲ್ ಬಶೀರ್, ಅಬ್ದುಲ್ ಸತ್ತಾರ್, ರಾಜ್ಯ ಅಲೆಮಾರಿ ನಿಗಮದ ಅಧ್ಯಕ್ಷ ರವೀಂದ್ರ ರೈ ಉಳಿದೊಟ್ಟು, ಖಿಯಾ ನ್ಯೂಪಡ್ಪುಇದರ ಅಧ್ಯಕ್ಷ ಮುಹಮ್ಮದ್ ಅಸೀಫ್, ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಅಶ್ರಫ್, ಇಕ್ಬಾಲ್ ಎಂಎಚ್ ಮತ್ತಿತರರು ಪಾಲ್ಗೊಂಡಿದ್ದರು.






