ಕಾರ್ಕಳ : 7 ಗ್ರಾ.ಪಂ.ಗೆ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ
ಕಾರ್ಕಳ : ತಾಲೂಕಿನ 7 ಗ್ರಾ.ಪಂ.ಗಳಾದ ಮರ್ಣೆ, ಶಿರ್ಲಾಲು, ಕುಕ್ಕುಂದೂರು, ನೀರೆ, ನಿಟ್ಟೆ, ಸಾಣೂರು, ಬೋಳ ಪಂಚಾಯತ್‌ಗೆ ಮಂಗಳವಾರ ಅಧ್ಯಕ್ಷ ಉಪಾಧ್ಯಕ್ಷ ಆಯ್ಕೆ ಪ್ರಕ್ರಿಯೆ ನಡೆಯಿತು. ಮರ್ಣೆ ಪಂಚಾಯತ್ ಅಧ್ಯಕ್ಷರಾಗಿ ಜ್ಯೋತಿ ಪೂಜಾರಿ, ಉಪಾಧ್ಯಕ್ಷರಾಗಿ ಕುರುಂಬಿಲ ಅವರು ಆಯ್ಕೆಯಾಗಿರುತ್ತಾರೆ. ಶಿರ್ಲಾಲು ಪಂಚಾಯತ್ ಅಧ್ಯಕ್ಷರಾಗಿ ರಮಾನಂದ ಹಾಗೂ ಉಪಾಧ್ಯಕ್ಷರಾಗಿ ಪ್ರಮೀಳಾ, ಕುಕ್ಕುಂದೂರು ಪಂಚಾಯತ್ ಅಧ್ಯಕ್ಷರಾಗಿ ಶಶಿಮಣಿ ನಕ್ರೆ ಹಾಗೂ ಉಪಾಧ್ಯಕ್ಷರಾಗಿ ಅನಿಲ್ ಪೂಜಾರಿ ನೆಲ್ಲಿಗುಡ್ಡೆ, ನಿಟ್ಟೆ ಪಂಚಾಯತ್ ಅಧ್ಯಕ್ಷರಾಗಿ ಸತೀಶ್ ಪೂಜಾರಿ, ಉಪಾಧ್ಯಕ್ಷರಾಗಿ ಸುಮಿತ್ರಾ ಆಚಾರ್ಯ, ಸಾಣೂರು ಪಂಚಾಯತ್ ಅಧ್ಯಕ್ಷರಾಗಿ ಸುಜಾತ ಶೆಟ್ಟಿ, ಉಪಾಧ್ಯಕ್ಷರಾಗಿ ಪ್ರಸಾದ್ ಪೂಜಾರಿ, ಬೋಳ ಪಂಚಾಯತ್ ಅಧ್ಯಕ್ಷರಾಗಿ ಬೋಳ ಸುಧಾ ಎಸ್. ಪೂಜಾರಿ ಉಪಾಧ್ಯಕ್ಷರಾಗಿ ಕಿರಣ್ ಶೆಟ್ಟಿ ಆಯ್ಕೆಯಾಗಿರುತ್ತಾರೆ.
Next Story





