ಟೂಲ್ ಕಿಟ್ ಪ್ರಕರಣ: ನಿಕಿತಾ ಜೇಕಬ್ ಗೆ ಪ್ರಯಾಣ ಉದ್ದೇಶಿತ ನಿರೀಕ್ಷಣಾ ಜಾಮೀನು ನೀಡಿದ ಹೈಕೋರ್ಟ್

ಮುಂಬೈ: ಟೂಲ್ ಕಿಟ್ ಪ್ರಕರಣಕ್ಕೆ ಸಂಬಂಧಿಸಿ ದಿಲ್ಲಿ ಪೊಲೀಸರು ಸಲ್ಲಿಸಿರುವ ಎಫ್ ಐಆರ್ ಗೆ ಸಂಬಂಧಿಸಿ ಬಾಂಬೆ ಹೈಕೋರ್ಟ್ ಮುಂಬೈ ಮೂಲದ ವಕೀಲೆ ನಿಕಿತಾ ಜೇಕಬ್ ಗೆ ಪ್ರಯಾಣ ಉದ್ದೇಶಿತ ನಿರೀಕ್ಷಣಾ ಜಾಮೀನು ನೀಡಿದೆ.
ನಿಕಿತಾ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಆಲಿಸಿದ ಬಾಂಬೆ ಹೈಕೋರ್ಟ್ ಮೂರು ವಾರಗಳ ಪ್ರಯಾಣ ಉದ್ದೇಶಿತ ಜಾಮೀನು ನೀಡಿದೆ. ಒಂದು ವೇಳೆ ಅವರು ಬಂಧಿಸಲ್ಟಟ್ಟರೆ 25,000 ರೂ. ವೈಯಕ್ತಿಕ ಬಾಂಡ್ ಹಾಗೂ ಅಷ್ಟೇ ಮೊತ್ತದ ಶ್ಯೂರಿಟಿ ಮೇರೆಗೆ ಬಿಡುಗಡೆ ಮಾಡಲಾಗುವುದು ಎಂದು ನ್ಯಾಯಾಲಯ ಹೇಳಿದೆ.
ಟೂಲ್ ಕಿಟ್ ಪ್ರಕರಣವನ್ನು ತನಿಖೆ ನಡೆಸುತ್ತಿರುವ ದಿಲ್ಲಿ ಪೊಲೀಸರು ಶಂಕಿಸಿರುವ ಮೂವರ ಪೈಕಿ ನಿಕಿತಾ ಕೂಡ ಒಬ್ಬರಾಗಿದ್ದಾರೆ. ಇದೇ ಪ್ರಕರಣಕ್ಕೆ ಸಂಬಂಧಿಸಿ ಕಳೆದ ವಾರ ಪರಿಸರ ಹೋರಾಟಗಾರ್ತಿ 21ರ ಹರೆಯದ ದಿಶಾ ರವಿಯನ್ನು ಪೊಲೀಸರು ಬಂಧಿಸಿದ್ದರು. ನಿಕಿತಾ ಜೇಕಬ್ ಹಾಗೂ ಇಂಜಿನಿಯರ್ ಶಂತನು ಮುಲುಕ್ ವಿರುದ್ಧ ಜಾಮೀನುರಹಿತ ವಾರಂಟ್ ನ್ನು ಹೊರಡಿಸಲಾಗಿತ್ತು.
Next Story





