ಫರಂಗಿಪೇಟೆ: ಪಾಪ್ಯುಲರ್ ಫ್ರಂಟ್ ಸಂಸ್ಥಾಪನಾ ದಿನಾಚರಣೆ

ಫರಂಗಿಪೇಟೆ, ಫೆ. 17: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಇದರ ಸಂಸ್ಥಾಪನಾ ದಿನಾಚರಣೆ ಫರಂಗಿಪೇಟೆಯಲ್ಲಿ ಆಚರಿಸಲಾಯಿತು. ಪಾಪ್ಯುಲರ್ ಫ್ರಂಟ್ ಫರಂಗಿಪೇಟೆ ವಲಯ ಅಧ್ಯಕ್ಷ ಬಶೀರ್ ಅಮೆಮ್ಮಾರ್ ದ್ವಜಾರೋಹಣಗೈದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಸಮಿತಿ ಸದಸ್ಯ ಇಮ್ತಿಯಾಜ್ ತುಂಬೆ ಶೋಷಿತ ದಮನಿತ ಸಮುದಾಯದ ಸಭಲೀಕರಣಕ್ಕಾಗಿ ಸಮಾನ ಮನಸ್ಕ ಸಂಘಟನೆಗಳು ಸೇರಿ 2007 ರಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಎಂಬ ಹೆಸರಿನಲ್ಲಿ ರೂಪುಗೊಂಡವು. ಇಲ್ಲಿನ ಮುಸ್ಲಿಮರು ಎದುರಿಸುತ್ತಿರುವ ಸವಾಲುಗಳನ್ನು ಅರ್ಥೈಸಿ ಮುಸ್ಲಿಮ್ ಸಮುದಾಯದ ಕೆಲವೇ ಕೆಲವು ಮಂದಿಯಿಂದ ಉಂಟಾದ ಈ ಆಂದೋಲನ ಭಾರತದ ಮೂಲೆ ಮೂಲೆಗೂ ವ್ಯಾಪಿಸಿ ಜನರಲ್ಲಿ ಜಾಗೃತಿ ಮೂಡಿಸಿ ಒಂದು ಚಳುವಳಿಯಾಗಿ ಮುಂದುವರಿಯುತ್ತಿದೆ ಎಂದರು.
ಮುಖ್ಯ ಅತಿಥಿಗಳಾಗಿ ಫರಂಗಿಪೇಟೆ ಡಿವಿಷನ್ ಅಧ್ಯಕ್ಷ ನಝೀರ್ ಕುಂಜತ್ಕಳ,ಕಾರ್ಯದರ್ಶಿ ಮುಸಬ್ಬ ತುಂಬೆ, ಎಸ್ಡಿಪಿಐ ಮಂಗಳೂರು ಕ್ಷೇತ್ರ ಸಮಿತಿ ಉಪಾಧ್ಯಕ್ಷ ಸುಲೈಮಾನ್ ಉಸ್ತಾದ್, ಪುದು ಗ್ರಾಮ ಸಮಿತಿ ಉಪಾಧ್ಯಕ್ಷ ಅಬ್ಬಾಸ್ ಪೇರಿಮಾರ್, ಕಾರ್ಯದರ್ಶಿ ಶಾಫಿ ಅಮೆಮ್ಮಾರ್, ಪಾಪ್ಯುಲರ್ ಫ್ರಂಟ್ ಬ್ಲಡ್ಡ್ ಡೋನರ್ಸ್ ಫಾರಮ್ ಉಪಾಧ್ಯಕ್ಷ ಮಾರ್ಝುಕು, ಲೇತಿಫ್ ಕುಂಪನಮಜಲ್ ಮತ್ತಿತರರು ಉಪಸ್ಥಿತರಿದ್ದರು





