ಬೆಳ್ಳಾರೆಯಲ್ಲಿ ಪಾಪ್ಯುಲರ್ ಫ್ರಂಟ್ ಸಂಸ್ಥಾಪನಾ ದಿನಾಚರಣೆ

ಸುಳ್ಯ: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ಬೆಳ್ಳಾರೆ ವಲಯ ಸಮಿತಿ ವತಿಯಿಂದ ಧ್ವಜಾರೋಹಣ ಕಾರ್ಯಕ್ರಮ ಇಂದು ಜರುಗಿತು. ಪಾಪ್ಯುಲರ್ ಫ್ರಂಟ್ ಬೆಳ್ಳಾರೆ ವಲಯ ಅಧ್ಯಕ್ಷ ಫಾರೂಕ್. ಎನ್ ಧ್ವಜಾರೋಹಣ ನೆರವೇರಿಸಿದರು.
ಎಸ್.ಡಿ.ಪಿ.ಐ ರಾಜ್ಯ ಸಮಿತಿ ಸದಸ್ಯರೂ ಬೆಳ್ಳಾರೆ ಗ್ರಾಮ ಪಂಚಾಯಿತಿ ಸದಸ್ಯರೂ ಆದ ಇಕ್ಬಾಲ್ ಬೆಳ್ಳಾರೆ ಸಂದೇಶ ಭಾಷಣ ಮಾಡಿದರು.
ನಂತರ ರೈತ ಚಳುವಳಿಯಲ್ಲಿ ಮರಣ ಹೊಂದಿದ ರೈತರಿಗೆ ಮೌನ ಪ್ರಾರ್ಥನೆ ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ ಪಾಪ್ಯುಲರ್ ಫ್ರಂಟ್ ರಾಜ್ಯ ನಾಯಕ ಶಾಫಿ ಬೆಳ್ಳಾರೆ, ಎಸ್.ಡಿ.ಪಿ.ಐ ನಾಯಕರಾದ ಮಮ್ಮಾಲಿ ಹಾಜಿ, ಬಿ.ಎ.ಬಶೀರ್, ಯು.ಎಚ್.ಝೈನುದ್ದೀನ್, ಅಬ್ದುಲ್ ರಹಿಮಾನ್ ತಂಬಿನಮಕ್ಕಿ, ಎಸ್.ಡಿ.ಪಿ.ಐ ವಲಯ ಅಧ್ಯಕ್ಷ ಸಿದ್ದೀಕ್ ಬೆಳ್ಳಾರೆ, ಪಾಪ್ಯುಲರ್ ಫ್ರಂಟ್ ಸುಳ್ಯ ಡಿವಿಷನ್ ಕಾರ್ಯದರ್ಶಿ ಶಾಹೀದ್.ಎಂ, ವಲಯ ಕಾರ್ಯದರ್ಶಿ ಶಾಫಿ.ಟಿ ಮುಂತಾದವರು ಉಪಸ್ಥಿತರಿದ್ದರು.
ನಿಜಾಮುದ್ದೀನ್ ಸ್ವಾಗತಿಸಿದರು. ಬಶೀರ್ ವಂದಿಸಿದರು.
Next Story





