ವಿಟ್ಲ: ಏಕದಿನ ಮತಪ್ರವಚನ
ವಿಟ್ಲ: ವಿಟ್ಲ ಕೇಂದ್ರ ಜುಮಾ ಮಸೀದಿ, ದುನಿಯಾ ಫ್ರೆಂಡ್ಸ್ ಮೇಗಿನಪೇಟೆ ಹಾಗೂ ರೆಡ್ ಏರೆಂಜರ್ಸ್ ವಿಟ್ಲ ಇದರ ವತಿಯಿಂದ ವಿಟ್ಲ ಕೇಂದ್ರ ಜುಮಾ ಮಸೀದಿಯ ಆವರಣದಲ್ಲಿ ಏಕದಿನ ಮತಪ್ರವಚನ ನಡೆಯಿತು. ಅಬ್ದುಲ್ ಹಮೀದ್ ಫೈಝಿ ಕಿಲ್ಲೂರು ಮತಪ್ರವಚನ ನೀಡಿದರು.
ವಿಟ್ಲ ಕೇಂದ್ರ ಜುಮಾ ಮಸೀದಿ ಖತೀಬ್ ಕಾರ್ಯಕ್ರಮ ಉದ್ಘಾಟಿಸಿದರು. ಮಸೀದಿ ಅದ್ಯಕ್ಷ ಇಬ್ರಾಹಿಂ ಹಳೆಮನೆ ಅಧ್ಯಕ್ಷತೆ ವಹಿಸಿದ್ದರು.
ಡಿ' ಗ್ರೂಪ್ ಅಧ್ಯಕ್ಷ ಖಲಂದರ್ ಪರ್ತಿಪ್ಪಾಡಿ, ಹೊರೈಝನ್ ಶಾಲೆಯ ಕೋಶಾಧಿಕಾರಿ ವಿ.ಎಚ್.ಅಶ್ರಫ್, ವಿಟ್ಲ ನಗರ ಕಾಂಗ್ರೆಸ್ ಸಮಿತಿ ಅಧ್ಯಕ್ಷ ವಿ.ಕೆ.ಎಂ.ಅಶ್ರಫ್, ವಿಟ್ಲ ಕೇಂದ್ರ ಜುಮಾ ಮಸೀದಿಯ ಕಾರ್ಯದರ್ಶಿ ಇಸ್ಮಾಯಿಲ್ ಪರ್ತಿಪ್ಪಾಡಿ, ದೀಪಕ್ ಬೀಡಿ ಕಂಟ್ರಾಕ್ಟರ್ ವಿ.ಎಚ್.ನಿಸಾರ್, ಮಸೀದಿಯ ಕೋಶಾಧಿಕಾರಿ ಶೆರೀಫ್ ಮೇಗಿನಪೇಟೆ, ಯೂತ್ ವಿಂಗ್ ಅಧ್ಯಕ್ಷ ರಫೀಕ್ ಪೊನ್ನೋಟು, ಜೆಡಿಎಸ್ ನ ಹಮೀದ್, ಜೊತೆ ಕಾರ್ಯದರ್ಶಿ ಹಮೀದ್ ಬದ್ರಿಯಾ,ವಿ.ಪಿ.ಅಶ್ರಫ್ ಬಹರೈನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ವಿ.ಕೆ.ಎಂ.ಹಂಝು ಸ್ವಾಗತಿಸಿ, ಇಕ್ಬಾಲ್ ಹಳೆಮನೆ ವಂದಿಸಿದರು.





