ಬಿ.ಸಿ.ರೋಡ್: ಸಮಸ್ತ ಸಂದೇಶ ಕ್ಯಾಂಪೇನ್ ಉದ್ಘಾಟನೆ

ಬಿ.ಸಿ.ರೋಡ್: ಪೆ.17, ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಕರ್ನಾಟಕ ಮುಶಾವರದ ವತಿಯಿಂದ ಪೆ.16 ರಿಂದ ಎಪ್ರಿಲ್ 30 ರ ತನಕ ನಡೆಯುವ ಸಂದೇಶ ಕ್ಯಾಂಪೇನ್ ನ ಉದ್ಘಾಟನಾ ಸಮಾರಂಭವು ಮಿತ್ತಬೈಲ್ ನ ಶೈಖುನಾ ಅಬ್ದುಲ್ ಜಬ್ಬಾರ್ ಉಸ್ತಾದ್ ವೇದಿಕೆಯಲ್ಲಿ ಮಂಗಳವಾರ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಸಮಸ್ತ ಕೇಂದ್ರ ಮುಶಾವರದ ಅದ್ಯಕ್ಷ ಸಯ್ಯಿದ್ ಮುಹಮ್ಮದ್ ಜಿಫ್ರೀ ಮುತ್ತುಕೋಯ ತಂಙಳ್ ಮಾತನಾಡಿ, "ಆದರ್ಶ ಪ್ರಬುದ್ದತೆ, ಆಧ್ಯಾತ್ಮಿಕ ಪ್ರಭೆ" ಎಂಬ ದ್ಯೇಯ ವಾಕ್ಯದೊಂದಿಗೆ ನೂತನವಾದ, ಅಕ್ರಮ, ಅನೈತಿಕತೆ, ಅನ್ಯಾಯ ಮುಂತಾದ ಧರ್ಮವಿರೋಧಿ ಹಾಗೂ ಕಾನೂನುಬಾಹಿರ ಚಟುವಟಿಕೆಗಳನ್ನು ತಡೆಕಟ್ಟುವ ಮತ್ತು ನಿರ್ಮೂಲನೆ ಮಾಡುವ ಸಲುವಾಗಿ ಹಮ್ಮಿಕೊಂಡ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಕರೆ ನೀಡಿದರು.
ಸಮಸ್ತ ಕರ್ನಾಟಕ ಮುಶಾವರದ ಅದ್ಯಕ್ಷ ಸಯ್ಯಿದ್ ಎನ್.ಪಿ.ಎಂ. ಝೈನುಲ್ ಆಬಿದೀನ್ ತಂಙಳ್ ಕುನ್ನುಂಗೈ ಅದ್ಯಕ್ಷತೆ ವಹಿಸಿದ್ದರು. ಸಮಸ್ತ ಕರ್ನಾಟಕ ಮುಶಾವರ ಕಾರ್ಯದರ್ಶಿ ಬಿ.ಕೆ.ಅಬ್ದುಲ್ ಖಾದಿರ್ ಅಲ್ ಖಾಸಿಮಿ ಬಂಬ್ರಾಣ ಪ್ರಸ್ತಾವನೆಗೈದರು. ಮಿತ್ತಬೈಲ್ ಮುಹಿಯುದ್ದೀನ್ ಜುಮಾ ಮಸೀದಿ ಅಧ್ಯಕ್ಷ ಮುಹಮ್ಮದ್ ಸಾಗರ್ ದ್ವಜಾರೋಹಣ ಹಾಗೂ ಅಲವೀ ದಾರಿಮಿ ಕುಝಿಮಣ್ಣ ಸಂದೇಶ ಬಾಷಣಗೈದರು.
ಸಮಸ್ತ ಕರ್ನಾಟಕ ಮುಶಾವರದ ಕೋಶಾಧಿಕಾರಿ ಸಯ್ಯಿದ್ ಝೈನುಲ್ ಆಬಿದೀನ್ ಜಿಫ್ರೀ ತಂಙಳ್ ಬೆಳ್ತಂಗಡಿ, ಸಮಸ್ತ ಕರ್ನಾಟಕ ಮುಶಾವರದ ಕಾರ್ಯಾದ್ಯಕ್ಷ ಕೆ.ಎಂ.ಇಬ್ರಾಹಿಂ ಬಾಖವಿ ಕೆ.ಸಿ.ರೋಡ್, ಸಮಸ್ತ ಕರ್ನಾಟಕ ಮುಶಾವರದ ಉಪಾದ್ಯಕ್ಷ ಕೆ.ಎಂ. ಉಸ್ಮಾನುಲ್ ಫೈಝಿ ಉಳ್ಳಾಲ, ಸಮಸ್ತ ಕರ್ನಾಟಕ ಮುಶಾವರದ ಸದಸ್ಯ ಅಬ್ದುಲ್ ಅಝೀಝ್ ದಾರಿಮಿ ಚೊಕ್ಕಬೆಟ್ಟು, ಮಿತ್ತಬೈಲ್ ಖತೀಬ್ ಅಶ್ರಫ್ ಪೈಝಿ ಮಾತನಾಡಿದರು.
ಪ್ರಮುಖರಾದ ಹುಸೈನ್ ಬಾಅಲವಿ ತಂಙಳ್ ಕುಕ್ಕಾಜೆ, ಅಮೀರ್ ತಂಙಳ್ ಕಿನ್ಯ, ಅಬೂಬಕ್ಕರ್ ಸಿದ್ದೀಕ್ ದಾರಿಮಿ ಒಮಾನ್, ಕಾಸಿಂ ದಾರಿಮಿ ತೋಡಾರು, ಅಬ್ದುಲ್ ಹಮೀದ್ ದಾರಿಮಿ ಸಂಪ್ಯ, ಹನೀಫ್ ದಾರಿಮಿ ಸವಣೂರು, ಕೆ.ಎಸ್. ಇಸ್ಮಾಯಿಲ್ ಹಾಜಿ ಕಲ್ಲಡ್ಕ, ಇಸ್ಮಾಯಿಲ್ ತಂಙಳ್ ಉಪ್ಪಿನಂಗಡಿ, ಉಮರ್ ದಾರಿಮಿ ಸಾಲ್ಮರ, ಕೆ.ಬಿ.ಅಬ್ದುಲ್ ಖಾದಿರ್ ದಾರಿಮಿ ಕೊಡುಂಗಾಯಿ, ಉಸ್ಮಾನ್ ದಾರಿಮಿ ಸುರಲ್ಪಾಡಿ, ಉಮರ್ ಫೈಝಿ ಸಾಲ್ಮರ, ಎಸ್. ಬಿ. ಮುಹಮ್ಮದ್ ದಾರಿಮಿ ಮುಲ್ಕಿ, ಅನೀಸ್ ಕೌಸರಿ ಕುಂಬ್ರ, ಶೇಖ್ ಮುಹಮ್ಮದ್ ಇರ್ಫಾನಿ ಕಲ್ಲಡ್ಕ, ಅನೀಸ್ ಕೌಸರಿ ಕುಂಬ್ರ, ಇಕ್ಬಾಲ್ ಬಾಳಿಲ, ಅಬ್ದುಸ್ಸಲಾಂ ಮಿತ್ತಬೈಲು, ಎಸ್.ಎಂ. ಮುಹಮ್ಮದ್ ಅಲಿ ಶಾಂತಿ ಅಂಗಡಿ, ರಶೀದ್ ಹಾಜಿ ಪರ್ಲಡ್ಕ, ಶಾಹುಲ್ ಹಮೀದ್ ಹಾಜಿ ಮೆಟ್ರೋ, ಹೈದರ್ ದಾರಿಮಿ ಕರಾಯ, ಇಸ್ಮಾಯಿಲ್ ಫೈಝಿ ಸೂರಿಂಜೆ, ಅಬ್ಬಾಸ್ ಮದನಿ ಗಟ್ಟಿಮನೆ, ಲತೀಫ್ ದಾರಿಮಿ ರೆಂಜಲಾಡಿ, ಮುಹಮ್ಮದ್ ಮುಸ್ಲಿಯಾರ್ ಮುಂಡೋಳೆ, ಇಸ್ಮಾಯಿಲ್ ಯಮಾನಿ ತಿಂಗಳಾಡಿ, ಖಲಂದರ್ ಶಾಫಿ ನಂದಾವರ, ಮಜೀದ್ ದಾರಿಮಿ ತೋಡಾರು, ಮಾಹಿನ್ ದಾರಿಮಿ ಪಾತೂರು, ಇಬ್ರಾಹಿಂ ದಾರಿಮಿ ಕಡಬ, ಶರೀಫ್ ದಾರಿಮಿ ಅಡ್ಡೂರು, ಉಸ್ಮಾನ್ ದಾರಿಮಿ ಫರಂಗಿಪೇಟೆ, ಸಿದ್ದೀಕ್ ಅಬ್ದುಲ್ ಖಾದರ್ ಬಂಟ್ವಾಳ, ಉಮರುಲ್ ಫಾರೂಕ್ ಫೈಝಿ ಮಿತ್ತಬೈಲ್, ಖಲೀಲುರ್ರಹ್ಮಾನ್ ದಾರಿಮಿ ಮಾರಿಪಳ್ಳ, ಇಸ್ಮಾಯಿಲ್ ಯಮಾನಿ ತಿಂಗಳಾಡಿ, ಸಿತಾರ್ ಅಬ್ದುಲ್ ಮಜೀದ್ ಹಾಜಿ ಮೊದಲಾದವರು ಬಾಗವಹಿಸಿದ್ದರು.
ಸಮಸ್ತ ಸಂದೇಶ ಕ್ಯಾಂಪೈನ್ ಸ್ವಾಗತ ಸಮಿತಿ ಕನ್ವೀನರ್ ಕೆ.ಎಲ್ ಉಮರ್ ದಾರಿಮಿ ಪಟ್ಟೋರಿ ಸ್ವಾಗತಿಸಿ, ಸಮಸ್ತ ಕರ್ನಾಟಕ ಮುಶಾವರದ ಸಂಘಟನಾ ಕಾರ್ಯದರ್ಶಿ ಕೆ.ಪಿ.ಎಂ. ಶರೀಫ್ ಫೈಝಿ ಕಡಬ ವಂದಿಸಿದರು. ಸಮಸ್ತ ಕರ್ನಾಟಕ ಮುಶಾವರದ ಜೊತೆ ಕಾರ್ಯದರ್ಶಿ ಕೆ.ಐ.ಅಬ್ದುಲ್ ಖಾದಿರ್ ದಾರಿಮಿ ಕುಕ್ಕಿಲ ಕಾರ್ಯಕ್ರಮ ನಿರೂಪಿಸಿದರು.









