ಡೈನೊಸಾರ್ಗಳ ನಾಶಕ್ಕೆ ಕಾರಣವಾಗಿದ್ದು ಸೌರವ್ಯೂಹದ ಅಂಚಿನಿಂದ ಅಪ್ಪಳಿಸಿದ ಧೂಮಕೇತು
ಹಾರ್ವರ್ಡ್ ವಿಜ್ಞಾನಿಗಳ ಅಧ್ಯಯನ

photo:twitter(@Harvard)
ವಾಶಿಂಗ್ಟನ್, ಫೆ. 17: ಆರು ಕೋಟಿ ಅರುವತ್ತು ಲಕ್ಷ ವರ್ಷಗಳ ಹಿಂದೆ ಬೃಹತ್ ಆಕಾಶಕಾಯವೊಂದು ಈಗಿನ ಮೆಕ್ಸಿಕೊ ದೇಶದ ಕರಾವಳಿಗೆ ಹೊಂದಿಕೊಂಡ ಸಮುದ್ರಕ್ಕೆ ಅಪ್ಪಳಿಸಿತು ಹಾಗೂ ಅದರ ಪರಿಣಾಮವಾಗಿ ಉದ್ಭವಿಸಿದ ಭೀಕರ ಚಳಿಯು ಡೈನೊಸಾರ್ಗಳು ಸೇರಿದಂತೆ ಭೂಮಿಯ ಮೇಲಿನ ಮುಕ್ಕಾಲು ಪಾಲು ಜೀವರಾಶಿಯನ್ನು ನಾಶಗೈದಿತು ಎಂದು ಅಧ್ಯಯನವೊಂದು ತಿಳಿಸಿದೆ.
ಸಮುದ್ರಕ್ಕೆ ಅಪ್ಪಳಿಸಿದ ವಸ್ತುವಿನ ಸ್ವರೂಪ ಮತ್ತು ಮೂಲದ ಕುರಿತು ದೀರ್ಘಕಾಲದಿಂದ ಇದ್ದ ರಹಸ್ಯತಗಳಣ್ನು ನಾವು ಬಿಡಿಸಿದ್ದೇವೆ ಎಂದು ಹಾರ್ವರ್ಡ್ ವಿಶ್ವವಿದ್ಯಾನಿಲಯದ ಇಬ್ಬರು ಖಗೋಳ ವಿಜ್ಞಾನಿಗಳು ಹೇಳಿದ್ದಾರೆ.
ಅಂದು ಸಮುದ್ರಕ್ಕೆ ಅಪ್ಪಳಿಸಿದ್ದು ಸೌರ ವ್ಯೂಹದ ಅಂಚಿನಲ್ಲಿರುವ ಶೀತಲ ವಲಯದಲ್ಲಿ ಹುಟ್ಟಿಕೊಂಡ ಧೂಮಕೇತು ಎನ್ನುವುದನ್ನು ನಮ್ಮ ಅಧ್ಯಯನ ತಿಳಿಸಿದೆ ಎಂದು ಅಧ್ಯಯನದ ಪ್ರಧಾನ ಲೇಖಕ ಅಮೀರ್ ಸಿರಾಜ್ ಎಎಫ್ಪಿ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ಅದೂ ಅಲ್ಲದೆ, ಆ ಧೂಮಕೇತು ಭೂಮಿಗೆ ಅಪ್ಪಳಿಸಲು ಗುರು ಗ್ರಹ ಕಾರಣ ಹಾಗೂ ಪ್ರತಿ 25 ಕೋಟಿಯಿಂದ 75 ಕೋಟಿ ವರ್ಷಗಳ ಅವಧಿಗೊಮ್ಮೆ ಇಂಥ ಪತನಗಳು ಸಂಭವಿಸುತ್ತವೆ ಎನ್ನುವುದನ್ನೂ ನಾವು ಪತ್ತೆಹಚ್ಚಿದ್ದೇವೆ ಎಂದು ಅವರು ಹೇಳಿದ್ದಾರೆ.
ಅಂದು ಸಮುದ್ರಕ್ಕೆ ಅಪ್ಪಳಿಸಿದ ವಸ್ತು ಕ್ಷುದ್ರಗ್ರಹವೊಂದರ ತುಂಡು ಹಾಗೂ ಅದು ನಮ್ಮ ಸೌರವ್ಯೂಹದ ಪ್ರಧಾನ ಪಥದಿಂದ ಬಂತು ಎಂಬ ಹಳೆಯ ಸಿದ್ಧಾಂತವನು ಈ ವಾರ ‘ಸಯಂಟಿಫಿಕ್ ರಿಪೋರ್ಟ್ಸ್’ ಪತ್ರಿಕೆಉಯಲ್ಲಿ ಪ್ರಕಟಗೊಂಡ ಅಧ್ಯಯನ ತಿಳಿಸಿದೆ.







