ಇಂಧನ ದರ ಏರಿಕೆಗೆ ಪ್ರಧಾನಿ ನರೇಂದ್ರ ಮೋದಿ ಪ್ರತಿಕ್ರಿಯೆ ಏನು ಗೊತ್ತಾ?

ಹೊಸದಿಲ್ಲಿ: ಭಾರತದ ಇಂಧನ ಆಮದು ಅವಲಂಬನೆ ಕಡಿಮೆ ಮಾಡುವ ಕುರಿತು ಹಿಂದಿನ ಸರಕಾರಗಳು ಗಮನ ಹರಿಸಿದಿದ್ದರೆ ಮಧ್ಯಮ ವರ್ಗದ ಮೇಲೆ ಇಷ್ಟೊಂದು ಹೊರೆಯಾಗುತ್ತಿರಲಿಲ್ಲ ಎಂದು ಪೆಟ್ರೋಲ್ ಬೆಲೆ 100 ರ ಗಡಿ ದಾಟಿದ ದಿನವಾಗಿರುವ ಬುಧವಾರ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಅಂತರ್ ರಾಷ್ಟ್ರೀಯ ದರಗಳಿಗೆ ಸಂಬಂಧಿಸಿರುವ ಚಿಲ್ಲರೆ ಇಂಧನ ಬೆಲೆಯಲ್ಲಿ ಭಾರೀ ಹೆಚ್ಚಳವನ್ನು ಉಲ್ಲೇಖಿಸದ ಪ್ರಧಾನಿ, ಭಾರತವು 2019-20ರ ಆರ್ಥಿಕ ವರ್ಷದಲ್ಲಿ ಶೇ.85ರಷ್ಟು ತೈಲ ಅಗತ್ಯತೆಗಳನ್ನು ಹಾಗೂ ಅದರ ಅನಿಲ ಅಗತ್ಯದ ಶೇ.53ರಷ್ಟನ್ನು ಆಮದು ಮಾಡಿಕೊಂಡಿದೆ ಎಂದು ಹೇಳಿದರು.
ನಮ್ಮಂತಹ ವೈವಿಧ‍್ಯಮಯ ಹಾಗೂ ಪ್ರತಿಭಾವಂತ ದೇಶವು ಇಂಧನ ಆಮದಿಗೆ ಅವಲಂಬನೆಯಾಗಿರಬಹುದೇ? ಎಂದು ಪ್ರಶ್ನಿಸಿದ ಪ್ರಧಾನಿ, ನಾನು ಯಾರನ್ನೂ ದೂಷಿಸಲು ಬಯಸುವುದಿಲ್ಲ.ನಾವು ಈ ವಿಷಯದಬಗ್ಗೆ ಮೊದಲೇ ಗಮನಹರಿಸಿದ್ದರೆ ನಮ್ಮ ಮಧ್ಯಮ ವರ್ಗದವರಿಗೆ ಇಷ್ಟೊಂದು ಹೊರೆಯಾಗುತ್ತಿರಲಿಲ್ಲ ಎಂದು ಹೇಳಬಯಸುವೆ ಎಂದರು.
ತಮಿಳುನಾಡಿನಲ್ಲಿ ತೈಲ ಹಾಗೂ ಅನಿಲ ಯೋಜನೆಗಳನ್ನುಉದ್ಘಾಟಿಸುವ ಆನ್ ಲೈನ್ ಕಾರ್ಯಕ್ರಮವೊಂದನ್ನು ಉದ್ದೇಶಿಸಿ ಮೋದಿ ಮಾತನಾಡುತ್ತಿದ್ದರು.





