ಹೆಜಮಾಡಿ ಟೋಲ್ ಬಳಿ ಸರ್ವಿಸ್ ಬಸ್ ಸ್ಥಗಿತ

ಪಡುಬಿದ್ರೆ : ಹೆಜಮಾಡಿಯ ಒಳರಸ್ತೆಯಲ್ಲಿ ತೆರಳುವ ಸರ್ವಿಸ್ ಬಸ್‍ಗಳಿಗೂ ಟೋಲ್ ಕಡ್ಡಾಯಗೊಳಿಸಿದ್ದು, ಈ ಹಿನ್ನಲೆಯಲ್ಲಿ ಮಂಗಳೂರು ಮತ್ತು ಉಡುಪಿ ಕಡೆಗೆ ಸಂಚರಿಸುವ ಬಸ್‍ಗಳು ಟೋಲ್ ಬಳಿ ಸ್ಥಗಿತಗೊಳಿಸಿದೆ.
ಉಡುಪಿ ಕಡೆಯಿಂದ ಸಂಚರಿಸುವ ಬಸ್ಸುಗಳು ಪ್ರಯಾಣಿಕರನ್ನು ಹೆಜಮಾಡಿ ಟೋಲ್ ಬಳಿ ನಿಲ್ಲಿಸಿ ಇಳಿಸುತಿದ್ದು, ಅಲ್ಲಿಂದ ಇನ್ನೊಂದು ಬಸ್‍ನಲ್ಲಿ ಪ್ರಯಾಣಿಕರು ಪ್ರಯಾಣಿಸಬೇಕಾಗಿದೆ. ಫಾಸ್ಟ್ ಟ್ಯಾಗ್ ಕಡ್ಡಾಯದಿಂದ ಫಾಸ್ಟ್ ಟ್ಯಾಗ್ ಅಳವಡಿಸದ ಬಸ್ಸುಗಳಿಗೆ ದುಬಾರಿ ಶುಲ್ಕ ಪಾವತಿಸಿ ಸಂಚರಿಸಬೇಕಾಗಿದೆ. ಈ ನಿಟ್ಟಿನಲ್ಲಿ ಸರ್ವಿಸ್ ಬಸುಗಳು ಸ್ಥಗಿತಗೊಳಿಸಿದೆ.
ಬುಧವಾರ ಟೋಲ್ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಸರ್ವಿಸ್ ಬಸ್‍ಗಳಿಗೆ ಒಳರಸ್ತೆಯ ಟೋಲ್‍ನಲ್ಲಿ ಟೋಲ್‍ನಲ್ಲಿ ವಿನಾಯಿತಿ ನೀಡಬೇಕು ಎಂದು ಆಗ್ರಹಿಸಿದ್ದರು.






.jpeg)

.jpeg)


