ಪಂಜಾಬ್: ಬಿಜೆಪಿ ಅಭ್ಯರ್ಥಿಗಿಂತ ಹೆಚ್ಚು ಮತಗಳನ್ನು ಪಡೆದ ʼನೋಟಾʼ

ಅಮೃತಸರ್: ಬುಧವಾರ ಘೋಷಣೆಯಾದ ಅಮೃತಸರ್ ಮುನಿಸಿಪಲ್ ಕಾರ್ಪೊರೇಷನ್ ಚುನಾವಣಾ ಫಲಿತಾಂಶದಲ್ಲಿ ವಾರ್ಡ್ ಸಂಖ್ಯೆ 37ರಲ್ಲಿ ಬಿಜೆಪಿ ಅಭ್ಯರ್ಥಿಗೆ ದೊರೆತ ಮತಗಳಿಗಿಂತ ಅಧಿಕ ನೋಟಾ ಮತಗಳು ಚಲಾವಣೆಯಾಗಿರುವ ಅಂಶ ಬೆಳಕಿಗೆ ಬಂದಿದೆ.
ಈ ವಾರ್ಡಿನಲ್ಲಿ ಸ್ಪರ್ಧಿಸಿದ್ದ ಬಿಜೆಪಿ ಅಭ್ಯರ್ಥಿ ಮನೋಹರ್ ಸಿಂಗ್‍ಗೆ ದೊರೆತ ಮತಗಳು 52 ಆಗಿದ್ದರೆ 60 ನೋಟಾ ಮತಗಳು ಚಲಾವಣೆಯಾಗಿದ್ದವು. ಈ ವಾರ್ಡ್‍ನಲ್ಲಿ ಕಾಂಗ್ರೆಸ್ ಪಕ್ಷದ ಗಗನದೀಪ್ ಸಿಂಗ್ 3,222 ಮತಗಳನ್ನು ಗಳಿಸಿ ಗೆದ್ದರೆ ಶಿರೋಮಣಿ ಅಕಾಲಿ ದಳದ ಇಂದರ್‍ಜಿತ್ ಸಿಂಗ್ ಅವರು 3,088 ಮತಗಳನ್ನು ಗಳಿಸಿ ಎರಡನೇ ಸ್ಥಾನಿಯಾದರು.
ಅಮೃತಸರ್ ಜಿಲ್ಲೆಯ ವ್ಯಾಪ್ತಿಯಲ್ಲಿರುವ ಮುನಿಸಿಪಲ್ ಕಾರ್ಪೊರೇಷನ್, ನಗರ ಪಂಚಾಯತ್, ಮುನಿಸಿಪಲ್ ಕೌನ್ಸಿಲ್‍ನ ಒಟ್ಟು 40 ವಾರ್ಡ್‍ಗಳ ಪೈಕಿ ಬಿಜೆಪಿಗೆ ಒಂದೇ ಒಂದು ಸ್ಥಾನವೂ ದೊರಕಿಲ್ಲ ಎಂದು ತಿಳಿದು ಬಂದಿದೆ.
Next Story





