ಹೂವಿನಹಡಗಲಿ: ಮಸ್‌ದರ್ ಪ್ರಧಾನ ಕಟ್ಟಡಕ್ಕೆ ಶಿಲಾನ್ಯಾಸ

ಹೂವಿನಹಡಗಲಿ: ಮಸ್‌ದರ್ ಎಜ್ಯು ಆ್ಯಂಡ್ ಚಾರಿಟಿ ಇದರ ಪ್ರಧಾನ ಕಟ್ಟಡದ ಶಿಲಾನ್ಯಾಸವನ್ನು ದಕ್ಷಿಣ ಕನ್ನಡ ಜಿಲ್ಲಾ ಸಂಯುಕ್ತ ಜಮಾಅತ್ ಖಾಝಿ ಖುರ್ರತುಸ್ಸಾದಾತ್ ಫಝಲ್ ಕೋಯಮ್ಮ ಮದನಿ ಅಲ್ ಬುಖಾರಿಯವರು ನೆರವೇರಿಸಿದರು.
ಹೂವಿನಹಡಗಲಿ ಪುರಸಭೆ ಅಧ್ಯಕ್ಷ ವಾರದ ಗೌಸ್ ಮೊಹಿದ್ದೀನ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಕರ್ನಾಟಕ ಉಲಮಾ ಒಕ್ಕೂಟದ ಕೋಶಾಧಿಕಾರಿ ಮೌಲಾನಾ ಹುಸೈನ್ ಸಅದಿ ಕೆಸಿರೋಡ್ ಉದ್ಘಾಟಿಸಿದರು. ಹಿರಿಯ ಮುಖಂಡ ಅಪ್ಸರ್ ಹುಸೈನ್ ಅತ್ತಾರಿ ಕೊಪ್ಪಳ ಮಸ್‌ದರ್ ಲೈವ್ ಯೂಟ್ಯೂಬ್ ಚಾನೆಲ್ ಬಿಡುಗಡೆ ಮಾಡಿದರು.
ಸಂಸ್ಥೆಯ ಕಾರ್ಯಾಧ್ಯಕ್ಷ ಮೌಲಾನಾ ಅಬೂ ಸುಫ್ಯಾನ್ ಮದನಿ ಹಾಗೂ ನಿರ್ದೇಶಕ ಉವೈಸ್ ಮಂಝರಿ ಹುಬ್ಬಳ್ಳಿ ಮುಖ್ಯ ಭಾಷಣ ಮಾಡಿದರು.
ದಾವಣಗೆರೆ ಮಾಜಿ ಮೇಯರ್ ಚಮನ್ ಸಾಹೇಬ್, ಪತ್ರಕರ್ತ ಎಸ್.ಎ ಗಫ್ಫಾರ್, ಗೋಲ್ಡನ್ ಅಬ್ದುಲ್ ಲತೀಫ್ ಹಾಜಿ, ಸಿ.ಎ ನಾಸಿರ್ ದಾವಣಗೆರೆ, ಇಂಜಿನಿಯರ್ ಅಬ್ದುಲ್ ಖದೀರ್ ದಾವಣಗೆರೆ, ಮಾಜಿ ತಹಶೀಲ್ದಾರ್ ಚಾಂದ್ ಸಾಹೇಬ್ ಹೂವಿನ ಹಡಗಲಿ, ಶೈಖ್ ಅಹ್ಮದ್ ಸಾರ್, ಜಿಲ್ಲಾ ವಕ್ಫ್ ನಿರ್ದೇಶಕ ದಾವಲ್ ಮಲಿಕ್ ಸಾಹೇಬ್ ಹಾಗೂ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.










